ನವದೆಹಲಿ: ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಆರು ಹೊಸ ಜಲಾಂತರ್ಗಾಮಿ ನೌಕೆಗಳನ್ನು ತಯಾರಿಸುವಲ್ಲಿ ವಿದೇಶಿ ಸಂಸ್ಥೆಗಳಿಗೆ ಪಾಲುದಾರರಾಗಲು ಭಾರತೀಯ ಕಂಪನಿಗಳಿಂದ ಕೇಂದ್ರ ರಕ್ಷಣಾ ಸಚಿವಾಲಯವು ಪ್ರಸ್ತಾಪವನ್ನು ಆಹ್ವಾನ ಮಾಡಿದೆ. ಈ ಯೋಜನೆಗೆ ಸುಮಾರು 45,000 ಕೋಟಿ ರೂ. ವೆಚ್ಚವಾಗಲಿದೆ.
ಆರು ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವಲ್ಲಿ ಭಾರತೀಯ ಕಂಪನಿಗಳನ್ನು ಸ್ಟ್ರಾಟೆಜಿಕ್ ಪಾರ್ಟ್ನರ್ ಎಂದು ಶಾರ್ಟ್ಲಿಸ್ಟ್ ಮಾಡುವ ಪ್ರಕ್ರಿಯೆ ‘ಎಕ್ಸ್ಪ್ರೆಶನ್ ಆಫ್ ಇಂಟ್ರೆಸ್ಟ್” ಅನ್ನು ಬಿಡುಗಡೆ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಭಾರತೀಯ ಕಂಪನಿಗಳ ಪಾಲುದಾರರಾಗಿರುವ ವಿದೇಶಿ ಕಂಪನಿಗಳನ್ನು ಆಯ್ಕೆ ಮಾಡಲು ಇದೇ ರೀತಿಯ ‘ಎಕ್ಸ್ಪ್ರೆಶನ್ ಆಫ್ ಇಂಟ್ರೆಸ್ಟ್” ಅನ್ನು ಎರಡು ವಾರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಕಳೆದ ಜನವರಿಯಲ್ಲಿ, ರಕ್ಷಣಾ ಸಚಿವಾಲಯವು ಜಲಾಂತರ್ಗಾಮಿ ನೌಕೆಗಳ ನಿರ್ಮಾಣವನ್ನು ಅನುಮೋದಿಸಿತ್ತು.
ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳು ““sea- denial” ಗೆ ನಿರ್ಣಾಯಕವಾಗಿದೆ, ಶತ್ರುಗಳ ಜಾಗವನ್ನು ಸಮುದ್ರದಲ್ಲಿ ಕಾರ್ಯನಿರ್ವಹಿಸಲು ಇದು ಅನುಮತಿಸುವುದಿಲ್ಲ. ಭಾರತೀಯ ಜಲಾಂತರ್ಗಾಮಿ ಶಕ್ತಿ ದುರ್ಬಲವಾಗಿದೆ. ಹಿಂದೂ ಮಹಾಸಾಗರ ಪ್ರದೇಶವನ್ನು ಕಾಯಲು ಸುಮಾರು 24 ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳ ಅಗತ್ಯವಿದೆ ಆದರೆ ನಮ್ಮ ಬಳಿ ಕೇವಲ ಬೆರಳೆಣಿಕೆಯಷ್ಟು ಜಲಾಂತರ್ಗಾಮಿ ನೌಕೆಗಳನ್ನು ಮಾತ್ರ ಇವೆ. ಚೀನಾವು 60 ಸಾಂಪ್ರದಾಯಿಕ ಮತ್ತು ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ.
ಭಾರತೀಯ ಶಿಪ್ಯಾರ್ಡ್ಗಳು ಮತ್ತು ವಿದೇಶಿ ತಯಾರಕರ ಹರಾಜುಗಳನ್ನು ಮೌಲ್ಯಮಾಪನ ಮಾಡಿ, ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಭಾರತೀಯ ಹಡಗುನೆಲೆಗಳಲ್ಲಿ ಜಲಾಂತರ್ಗಾಮಿ ನೌಕೆಗಳನ್ನು ತಯಾರಿಸಲು ಭಾರತೀಯ ನೌಕಾನೆಲೆ ಮತ್ತು ವಿದೇಶಿ ತಯಾರಕರು ಕೈಜೋಡಿಸಲಿದ್ದಾರೆ.
ಜಲಾಂತರ್ಗಾಮಿ ನೌಕೆಗಳು ಅತ್ಯಂತ ಸಂಕೀರ್ಣ ವೇದಿಕೆಗಳಾಗಿವೆ, ಭಾರತದಲ್ಲಿ ಜಲಾಂತರ್ಗಾಮಿ ನೌಕೆಗಳನ್ನು ತಯಾರಿಸುವುದರಿಂದ ಸ್ಥಳೀಯ ಉದ್ಯಮ, ವಿನ್ಯಾಸ ಮತ್ತು ನಿರ್ಮಾಣ ಸಾಮರ್ಥ್ಯ ಹೆಚ್ಚಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.