ಅಮರಾವತಿ: ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷಕ್ಕೆ ತೀವ್ರ ಸ್ವರೂಪದ ಹಿನ್ನಡೆಯಾಗಿದೆ, ಅದರ ಆರು ರಾಜ್ಯಸಭಾ ಸಂಸದರ ಪೈಕಿ ನಾಲ್ಕು ಮಂದಿ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ.
ಟಿಡಿಪಿ ಸಂಸದ ಎಸ್.ಚೌಧರಿ, ಸಿಎಂ ರಮೇಶ್, ಡಿಜಿ ವೆಂಕಟೇಶ್ ಈಗಾಗಲೇ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. ಮತ್ತೋರ್ವ ಸಂಸದ ಜಿ.ಎಮ್ ರಾವ್ ಅಧಿಕೃತವಾಗಿ ಇನ್ನಷ್ಟೇ ಬಿಜೆಪಿ ಸೇರಬೇಕಾಗಿದೆ. ಅನಾರೋಗ್ಯದ ಕಾರಣ ಅವರು ನಿನ್ನೆ ಬಿಜೆಪಿಗೆ ಸೇರ್ಪಡೆಯಾಗಿಲ್ಲ.
ರಾಜ್ಯಸಭಾದಲ್ಲಿ ಬಹುಸಂಖ್ಯೆಯನ್ನು ಹೊಂದಿರದ ಬಿಜೆಪಿಗೆ ಈ ನಾಲ್ವರ ಸೇರ್ಪಡೆ ಮಹತ್ವದ ಮುನ್ನಡೆಯನ್ನು ತಂದುಕೊಟ್ಟಿದೆ. ಆದರೆ ಇವರುಗಳ ನಿರ್ಧಾರ ಟಿಡಿಪಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಲಿದೆ.
ಎನ್ಡಿಎ ಭಾಗವಾಗಿದ್ದ ಟಿಡಿಪಿಯು ಚಂದ್ರಬಾಬು ನಾಯ್ಡು ಅವರ ತಪ್ಪು ನಿರ್ಧಾರದಿಂದಾಗಿ ಎನ್ಡಿಎ ಮೈತ್ರಿಕೂಟದಿಂದ ಹೊರ ನಡೆಯಿತು. ಇದರಿಂದಾಗಿ ಆ ಪಕ್ಷ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಎರಡಲ್ಲೂ ಹೀನಾಯವಾಗಿ ಸೋಲುಂಡಿತು.
TDP RS MPs- Y.S. Chowdary, C.M Ramesh, TG Venkatesh & GM Rao joined the BJP.
I welcome them into the party. pic.twitter.com/RbzGVoZk6o— Jagat Prakash Nadda (@JPNadda) June 20, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.