ನವದೆಹಲಿ: ಕಸ್ಟಮ್ಸ್ ದಾಖಲೆಗಳು ಆದಾಯ ತೆರಿಗೆ ರಿಟರ್ನ್ಗಳೊಂದಿಗೆ ಹೊಂದಿಕೆಯಾಗದ ಹಿನ್ನಲೆಯಲ್ಲಿ ಸುಮಾರು 3,500 ರಫ್ತುದಾರರು ಸರ್ಕಾರದ ಕಣ್ಗಾವಲಿನಲ್ಲಿದ್ದಾರೆ. ಅಲ್ಲದೇ, ಶೇ. 3 ರಷ್ಟು ವ್ಯಾಪಾರಿಗಳು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಲ್ಲಿಕೆಗಳಲ್ಲಿನ ವ್ಯತ್ಯಾಸದಿಂದಾಗಿ ಕಣ್ಗಾವಲಿದ್ದಾರೆ.
ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಸೋಮವಾರ, ರಫ್ತುದಾರರಿಗೆ ಪಾವತಿಸಿದ ಇಂಟಿಗ್ರೇಟೆಡ್ ಜಿಎಸ್ಟಿಯ ರಿಫಂಡ್ ಮೇಲಿನ ಚೆಕ್ ಸಲ್ಲಿಸುವಂತೆ ಸೂಚನೆಗಳನ್ನು ನೀಡಿದೆ. ರಫ್ತುದಾರರು ಮಾಡುವ ದುರುಪಯೋಗವನ್ನು ತಡೆಯುವ ಸಲುವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದು ಪ್ರಮಾಣಿಕರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
“ನಾವು ಪ್ರತಿ ವಹಿವಾಟಿನ ಮಾಹಿತಿಯನ್ನು ಪುನರ್ ತೆರೆಯುತ್ತಿಲ್ಲ ಅಥವಾ ಮರುಪಾವತಿಯನ್ನು ನಿಲ್ಲಿಸುತ್ತಿಲ್ಲ, ಆದರೆ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವವರ ಬಗ್ಗೆ ಸ್ವಲ್ಪ ಪರಿಶೀಲನೆ ನಡೆಸುತ್ತಿದ್ದೇವೆ. ಪ್ರಾಮಾಣಿಕ ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಭಯ ಮತ್ತು ತೊಂದರೆಗೊಳಗಾಗುವ ಆತಂಕ ಬೇಡ” ಎಂದು ತೆರಿಗೆ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.
ಸುಮಾರು 12 ಲಕ್ಷ ನೋಂದಾಯಿತ ರಫ್ತುದಾರರು ಮತ್ತು ಸುಮಾರು 1.5 ಲಕ್ಷ ಆಮದುದಾರರು ಸಕ್ರಿಯರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದು, ಅದರಲ್ಲಿ 3,500 ಸಂಭವನೀಯ ತಪ್ಪುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.