ವಿಶಾಖಪಟ್ಟಣ: ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿರುವ ಹಿನ್ನಲೆಯಲ್ಲಿ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯ ಯೋಧರು ಯೋಗಾಭ್ಯಾಸದಲ್ಲಿ ತೊಡಗಿದ್ದಾರೆ. ಯೋಗ ದಿನದಂದು ಇವರೆಲ್ಲರೂ ಯೋಗ ಪ್ರದರ್ಶನ ನಡೆಸಲಿದ್ದಾರೆ.
ವಿಶಾಖಪಟ್ಟಣ ನೌಕಾನೆಲೆಯಲ್ಲಿ ಹಡಗಿನ ಮೇಲೆ ಯೋಧರು ಯೋಗಾಭ್ಯಾಸದಲ್ಲಿ ತೊಡಗಿಕೊಂಡರು. ಸೇನಾತುಕಡಿಗಳು ಅವರವರ ಸೇನಾ ನೆಲೆಗಳಲ್ಲಿಯೇ ಯೋಗಾಭ್ಯಾಸ ಮಾಡುತ್ತಿದ್ದಾರೆ. ಗಡಿಗಳಲ್ಲಿಯೂ ಯೋಧರು ಯೋಗಾಭ್ಯಾಸದಲ್ಲಿ ನಿರತರಾಗಿದ್ದು, ಜೂನ್ 21ರಂದು ಯೋಗ ಪ್ರದರ್ಶನ ನೀಡಲಿದ್ದಾರೆ.
ಪ್ರತಿವರ್ಷವೂ ಯೋಧರು ಯೋಗದಿನದಂದು ಯೋಗ ಪ್ರದರ್ಶನ ಮಾಡುತ್ತಾರೆ ಮತ್ತು ಯೋಗದ ಮಹತ್ವವನ್ನು ಜನರಿಗೆ ಸಾರುತ್ತಾರೆ.
2015 ರಿಂದ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಮಾನಸಿಕ ಒತ್ತಡವನ್ನು ದೂರ ಮಾಡಲು, ದೈಹಿಕ ಸಾಮರ್ಥ್ಯವನ್ನು ವೃದ್ಧಿಸಲು ಭಾರತ ವಿಶ್ವಕ್ಕೆ ನೀಡಿರುವ ಮಹಾನ್ ಕೊಡುಗೆ ಯೋಗ. ಪ್ರತಿವರ್ಷದಂತೆ ಈ ವರ್ಷವೂ ದೇಶ ಮತ್ತು ವಿದೇಶಗಳಲ್ಲಿ ಯೋಗ ಸಮಾರಂಭಗಳು ಜರುಗಲಿದ್ದು, ಗಣ್ಯರಿಂದ ಹಿಡಿದು ಸಾಮಾನ್ಯರವರೆಗೆ ಎಲ್ಲರೂ ಇದರಲ್ಲಿ ಭಾಗಿಯಾಗಲಿದ್ದಾರೆ.
ಝಾರ್ಖಾಂಡಿನ ರಾಂಚಿಯಲ್ಲಿ ಬೃಹತ್ ಯೋಗ ಸಮಾರಂಭ ಜರುಗಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಇದರಲ್ಲಿ ಭಾಗಿಯಾಗಿ ಸಾವಿರಾರು ಜನರೊಂದಿಗೆ ಬೆರೆತು ಯೋಗ ಮಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.