ಉಪ್ಪುಂದ : ಸರಕಾರ ನೀಡುವ ಸವಲತ್ತುಗಳನ್ನು ಪಡೆದವರು ಸಮರ್ಪಕವಾಗಿ ಉಪಯೋಗಿಸುವಂತಾದಾಗ ಆ ಕೊಡುಗೆ ಸಾರ್ಥಕಗೊಳ್ಳುತ್ತದೆ ಎಂದು ಉಪ್ಪುಂದ ಗ್ರಾಪಂ ಅಧ್ಯಕ್ಷ ಜಗನ್ನಾಥ ಕೆ. ಹೇಳಿದರು.
ಮಂಗಳವಾರ ಗ್ರಾಪಂ ಸಭಾಭವನದಲ್ಲಿ 2014-15ನೇ ಸಾಲಿನ ಅನದಾನದಲ್ಲಿ ಶೇ.25 ರಷ್ಟು ಪ.ಜಾ ಮತ್ತು ಪ.ಪಂ ವರ್ಗದವರಿಗೆ ವಿವಿಧ ವೈಯಕ್ತಿಕ ಸವಲತ್ತು ವಿತರಿಸಿ ಮಾತನಾಡಿದರು. ಗ್ರಾಪಂನ 10.50 ಲಕ್ಷ ಅನುದಾನದಲ್ಲಿ ಶೇ.40ರಷ್ಟು ಶಿಕ್ಷಣಕ್ಕಾಗಿ ಮೀಸಲಿಟ್ಟು, ರೂ. 4.94 ಲಕ್ಷಗಳಲ್ಲಿ 5 ವಾಡ೯ಗಳಲ್ಲಿನ 29 ಕುಟುಂಬದ ಫಲಾನುಭವಿಗಳ ಪೈಕಿ 13 ಸೋಲಾರ್ ಲೈಟ್, 8 ಅಡುಗೆ ಅನಿಲ ಸಂಪರ್ಕ,6 ಹೊಲಿಗೆ ಯಂತ್ರ, ಒರ್ವ ವಿದ್ಯಾರ್ಥಿನಿಗೆ ಕಂಪ್ಯೂಟರ್ ಸಿಸ್ಟಂ ಹಾಗೂ ನೀರಾವರಿ ವ್ಯವಸ್ಥೆಗಾಗಿ ಇಬ್ಬರಿಗೆ ಪಂಪುಸೆಟ್ ಬಾಬ್ತು ತಲಾ ರೂ.10 ಸಾವಿರದ ಚೆಕ್ ವಿತರಿಸಿದ್ದಲ್ಲದೆ 21 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಫಲಾನುಭವಿಗಳ ಪರವಾಗಿ ಅಭಿಪ್ರಾಯವನ್ನು ಹೇಳಿದ ನಾಗರಾಜ ಮತ್ತು ರಾಮ, ಆಯ್ಕೆ ಪ್ರಕ್ರೀಯೆಯಲ್ಲಿ ಅರ್ಹರನ್ನು ಗುರುತಿವಿಕೆಯಲ್ಲಿ ತಾರತಮ್ಯವಾಗದಂತೆ ಎಚ್ಚರಿಕೆ ವಹಿಸಬೇಕು. ಉಪಯೋಗ ತಿಳಿಯದವರಿಗೆ ಕೆಲವು ಸವಲತ್ತುಗಳನ್ನು ನೀಡಿಯೂ ಪ್ರಯೋಜನವಾಗದು. ಅಲ್ಲದೇ ಅದನ್ನು ಉಪಯೋಗಿಸುವ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರಲ್ಲದೇ ಕಂಪ್ಯೂಟರ್ ಹಾಗೂ ಹೊಲಿಗೆ ಕಲಿತು ತರಬೇತಿ ಸರ್ಟಿಫಿಕೆಟ್ ಪಡೆದವರು ಇನ್ನೂ ಇದ್ದು ಇವರಿಗೂ ಈ ಸವಲತ್ತುಗಳು ಸಿಗುವಂತಾಗಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಉಪಾಧ್ಯಕ್ಷೆ ನಾಗಮ್ಮ ದೇವಾಡಿಗ, ಗ್ರಾಮ ಕರಣಿಕ ಮಂಜುನಾಥ ಹಾಗೂ ಗ್ರಾಪಂನ ಸರ್ವ ಸದಸ್ಯರು ಉಪಸ್ಥಿತರಿದ್ದರು. ಪಿಡಿಓ ಹರೀಶ್ ಮೊಗವೀರ ಸ್ವಾಗತಿಸಿ, ಕಾರ್ಯದರ್ಶಿ ಮಾಧವ ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.