ನವದೆಹಲಿ: ಸೋಮವಾರ ಆರಂಭವಾಗಿರುವ 17ನೇ ಲೋಕಸಭಾದಲ್ಲಿ ಭಾಗಿಯಾಗಲು ದೆಹಲಿಯಲ್ಲಿ ಬೀಡುಬಿಟ್ಟಿರುವ ನೂತನ ಸಂಸದರಿಗೆ 5 ಸ್ಟಾರ್ ಹೋಟೆಲ್ಗಳಲ್ಲಿ ತಂಗುವ ಅವಕಾಶ ಇಲ್ಲ. ಸರ್ಕಾರಿ ಬಂಗಲೆಗಳಲ್ಲೇ ಅವರು ತಂಗುವಂತಾಗಿದೆ. ಇವರಿಗೆಲ್ಲಾ ವೆಸ್ಟರ್ನ್ ಕೋರ್ಟ್ ಹಾಸ್ಟೆಲ್ ಕಾಂಪ್ಲೆಕ್ಸ್ಗಳಲ್ಲಿ ವಸತಿ ವ್ಯವಸ್ಥೆಯನ್ನು ಸರ್ಕಾರವೇ ಕಲ್ಪಿಸಿಕೊಟ್ಟಿದೆ.
ನೂತನ ಸಂಸದರಿಗೆ ವಸತಿಗಳನ್ನು ಇನ್ನಷ್ಟೇ ನಿಗದಿಪಡಿಸಬೇಕಿದೆ. ಹಿಂದೆಲ್ಲಾ ವಸತಿ ಸಿಗುವವರೆಗೂ ಸಂಸದರುಗಳು ಸ್ಟಾರ್ ಹೋಟೆಲ್ ಗಳಲ್ಲಿ ಬೀಡುಬಿಡುತ್ತಿದ್ದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ಖರ್ಚಾಗುತ್ತಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ನೂತನ ಸಂಸದರಿಗೆ ಸರ್ಕಾರಿ ಭವನಗಳಲ್ಲೇ ವಸತಿ ಸೌಕರ್ಯವನ್ನು ಕಲ್ಪಿಸಿದೆ.
ಕಳೆದ ವರ್ಷ ಎಪ್ರಿಲ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆಗೊಳಿಸಿದ, 88 ಕೊಠಡಿಗಳಿರುವ ನ್ಯೂ ವೆಸ್ಟರ್ನ್ ಕೋರ್ಟ್ ಅನೆಕ್ಸೆಗಳಲ್ಲಿ ವಸತಿಸಿಗದ ನೂತನ ಸಂಸದರಿಗೆ ತಂಗುವ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಹಳೆಯ ವೆಸ್ಟರ್ನ್ ಕೋರ್ಟ್ ಕಾಂಪ್ಲೆಕ್ಸಿನಲ್ಲೂ 74 ಕೊಠಡಿಗಳಿದ್ದು, ಇಲ್ಲೂ ನೂತನ ಸಂಸದರಿಗೆ ವಸತಿಯನ್ನು ಕಲ್ಪಿಸಲಾಗಿದೆ.
2014ರಲ್ಲಿ ನೂತನ ಸಂಸದರು ಹೋಟೆಲ್ ಗಳಲ್ಲಿ ತಂಗಿದ್ದರು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ಖರ್ಚು ಬಿದ್ದಿತ್ತು. ಈ ಬಾರಿ ಮೋದಿ ಸರ್ಕಾರ ಹಾಗಾಗದಂತೆ ಎಚ್ಚರಿಕೆ ವಹಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.