ನವದೆಹಲಿ: ದೇಶದ ಬೆಳವಣಿಗೆ ಮತ್ತು ಉದ್ಯೋಗವನ್ನು ವೃದ್ಧಿಸುವ ಉದ್ದೇಶದೊಂದಿಗೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 5 ರಂದು ಮಂಡಿಸಲಿರುವ ಬರುವ ಬಜೆಟ್ನಲ್ಲಿ ಸ್ಟಾರ್ಟ್ಅಪ್ಗಳಿಗೆ ಹೊಸ ತೆರಿಗೆ ಪ್ರಯೋಜನಗಳನ್ನು ನೀಡಲು ಸರ್ಕಾರ ಮುಂದಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ (DPIIT) ಮತ್ತು ಕಂದಾಯ ಇಲಾಖೆಯು ತೆರಿಗೆ ಸಾಪ್ಗಳ ಪ್ಯಾಕೇಜ್ ಅನ್ನು ಉದಾರೀಕರಣಗೊಳಿಸುತ್ತಿದೆ ಎನ್ನಲಾಗಿದೆ. ಷೇರುಗಳ ಮಾರಾಟದ ಸಮಯದಲ್ಲಿ ಎಂಪ್ಲಾಯೀ ಸ್ಟಾಕ್ ಆಪ್ಶನ್ ಸ್ಕೀಮ್ (ಇಎಸ್ಒಪಿ)ಗಳ ಮೇಲೆ ತೆರಿಗೆ ವಿಧಿಸುವ ಸರಳೀಕೃತ ಮಾನದಂಡಗಳನ್ನು ಸಾಪ್ಸ್ ಒಳಗೊಂಡಿದೆ.
ವರ್ಗ II ಪರ್ಯಾಯ ಹೂಡಿಕೆ ನಿಧಿ (ಎಐಎಫ್)ಗಳಿಗೂ ಏಂಜಲ್ ತೆರಿಗೆಯಿಂದ ವಿನಾಯಿತಿಯನ್ನು ವಿಸ್ತರಿಸುವ ಸಾಧ್ಯತೆಯನ್ನು ಸಹ DPIIT ಅನ್ವೇಷಿಸುತ್ತಿದೆ ಎಂದು ವರದಿಯಾಗಿದೆ, ಈ ಅನುಕೂಲತೆ ಪ್ರಸ್ತುತ ಕೆಲವು ವರ್ಗ I ಹೂಡಿಕೆದಾರರಿಗೆ ಮಾತ್ರ ನೀಡಲಾಗುತ್ತದೆ.
ಇದಲ್ಲದೆ, ಭಾರತದಲ್ಲಿ ನೆಲೆಗೊಂಡಿರುವ ನಿಧಿ ವ್ಯವಸ್ಥಾಪಕರಿಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯಿಂದ ವಿನಾಯಿತಿ ನೀಡುವ ಪ್ರಸ್ತಾಪವನ್ನೂ ಮಾಡಲಾಗಿದೆ ಎಂದು ಹೇಳಲಾಗಿದೆ. ದೇಶದಾಚೆಯ ನಿಧಿ ವ್ಯವಸ್ಥಾಪಕರಿಗೂ ಅಂತಹ ಯಾವುದೇ ತೆರಿಗೆಯನ್ನು ವಿಧಿಸದ ಕಾರಣ ಈ ನಿರ್ಧಾರ ಮಹತ್ವವನ್ನು ಪಡೆದುಕೊಳ್ಳಲಿದೆ. ಆದರೂ, ಈ ವಿಷಯದ ಬಗ್ಗೆ ಯಾವುದೇ ನಿರ್ಧಾರವು ಬಜೆಟ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ, ಏಕೆಂದರೆ ಅಂತಹ ವಿನಾಯಿತಿಗೆ ಸಂಬಂಧಿಸಿದ ನಿರ್ಧಾರವನ್ನು ಜಿಎಸ್ಟಿ ಕೌನ್ಸಿಲ್ ಮಾತ್ರ ತೆಗೆದುಕೊಳ್ಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.