ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಎಕ್ಸಾಂ ವಾರಿಯರ್ ಪುಸ್ತಕದ ಹೊಸ ಆವೃತ್ತಿಯನ್ನು ಹೊರತರಲು ಸಿದ್ಧರಾಗುತ್ತಿದ್ದಾರೆ, ಸಾರ್ವತ್ರಿಕ ಚುನಾವಣೆ ಸಂಪೂರ್ಣಗೊಂಡ ಹಿನ್ನಲೆಯಲ್ಲಿ ಅವರು ಹೊಸ ಆವೃತ್ತಿಯತ್ತ ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ.
ಈಗಾಗಲೇ ಎಕ್ಸಾಂ ವಾರಿಯರ್ ಪುಸ್ತಕದ ಅಪ್ಡೇಟೆಡ್ ಎಡಿಶನ್ ತರಲು ಯೋಜಿಸಲಾಗಿದೆ ಎಕ್ಸಾಂ ವಾರಿಯರ್ ಪುಸ್ತಕ ಎರಡು ದಶಲಕ್ಷ ಮಾರಾಟಗಳನ್ನು ಕಂಡಿದೆ. ಪ್ರಧಾನಿಯವರು ಹೊಸ ಆವೃತ್ತಿಯಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಪುಸ್ತಕವನ್ನುಬರೆಯಲು ಯೋಜಿಸಿದ್ದಾರೆ ಎನ್ನಲಾಗಿದೆ. ಪರಿಷ್ಕರಿಸಿದ ಪುಸ್ತಕದಲ್ಲಿ ಮಕ್ಕಳು ಗ್ಯಾಜೆಟ್ಗಳಿಗೆ ಅಡಿಕ್ಟ್ ಆಗುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
“ಎಕ್ಸಾಂ ವಾರಿಯರ್ ಪುಸ್ತಕ ಉತ್ತಮ ಪ್ರದರ್ಶನವನ್ನು ಕಂಡಿದೆ ಮತ್ತು ನಾವು ಈ ವರ್ಷದ ಅಂತ್ಯದಲ್ಲಿ ಈ ಪುಸ್ತಕದ ಹೊಸ ಆವೃತ್ತಿಯನ್ನು ಹೊರತರಲು ಕಾತುರರಾಗಿದ್ದೇವೆ” ಎಂದು ಪೆಂಗ್ವೀನ್ ರ್ಯಾಂಡಮ್ ಹೌಸ್ ಇಂಡಿಯಾದ ಮಿಲೀ ಐಶ್ವರ್ಯ ಹೇಳಿದ್ದಾರೆ.
ಜನವರಿ 29ರಂದು ಮಕ್ಕಳೊಂದಿಗೆ ಸಂವಾದ ನಡೆಸಿದ್ದ ಮೋದಿಯವರಿಗೆ, 208 ಪುಟಗಳ ಎಕ್ಸಾಂ ವಾರಿಯರ್ ಪುಸ್ತಕದ ಹೊಸ ಆವೃತ್ತಿಯನ್ನು ತರುವ ಯೋಚನೆ ಹೊಳೆಯಿತು. ಈ ಸಂವಾದದಲ್ಲಿ, ಪೋಷಕರೊಬ್ಬರು ನಮ್ಮ ಮಕ್ಕಳು ಓದುವ ಬದಲು ಸುದೀರ್ಘ ಸಮಯವನ್ನು ಆನ್ಲೈನ್ನಲ್ಲಿ ಕಳೆಯುತ್ತಿದ್ದಾರೆ ಎಂದು ಅವಲತ್ತು ತೋಡಿಕೊಂಡಿದ್ದರು. ಈ ವೇಳೆ ‘ಆತ ಪಬ್ ಜೀ ಆಡುತ್ತಾನೆಯೇ?” ಎಂದು ಮೋದಿ ಕೇಳಿದ್ದರು.ಹೌದು ಎಂದು ಆಕೆ ಉತ್ತರಿಸಿದ್ದರು. ಈ ವೇಳೆ ಮೋದಿಯವರು ಇಂತಹ ಅಪಾಯದ ಬಗ್ಗೆ ಪುಸ್ತಕ ಬರೆಯುವ ಚಿಂತನೆ ನಡೆಸಿದರು ಎಂದು ಹೇಳಲಾಗಿದೆ.
ಮಕ್ಕಳ ಮಾನಸಿಕ ಆರೋಗ್ಯ ಮತ್ತು ಗ್ಯಾಜೆಟ್ ಗಳಿಂದ ಅವರನ್ನು ಹೇಗೆ ದೂರವಿಡಬೇಕು ಎಂಬ ಬಗೆಗಿನ ಮೋದಿ ಪುಸ್ತಕಕ್ಕೆ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.