ಮುಂಬಯಿ: ಬರ ಮತ್ತು ಮಳೆಯ ಕೊರತೆಯ ನಡುವೆಯೂ ನಮ್ಮ ರಾಜ್ಯ 115.70 ಲಕ್ಷ ಮೆಟ್ರಿಕ್ ಟನ್ಗಳಷ್ಟು ಆಹಾರ ಉತ್ಪಾದನೆಯನ್ನು ಮಾಡಿದೆ, ಇದಕ್ಕೆ ಅನುಷ್ಠಾನಕ್ಕೆ ತರಲಾದ ವಿವಿಧ ನೀರು ಸಂರಕ್ಷಣಾ ಮಾದರಿಗಳೇ ಕಾರಣ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ನವದೆಹಲಿಗೆ ಆಗಮಿಸಿದ್ದ ವೇಳೆ ಅವರು ಈ ವಿಚಾರವನ್ನು ತಿಳಿಸಿದ್ದಾರೆ.
“ನಾವು 115.70 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಉತ್ಪಾದನೆ ಮಾಡಿದ್ದೇವೆ. ಮಳೆಗೆ ಅವಲಂಬಿತವಾಗುವುದನ್ನು ಕಡಿಮೆಗೊಳಿಸಿದ ಮತ್ತು ಪರ್ಯಾಯ ಸಿದ್ಧತೆಗಳನ್ನು ಮಾಡಿಕೊಂಡ ಕಾರಣ ಇದು ಸಾಧ್ಯವಾಗಿದೆ” ಎಂದಿದ್ದಾರೆ.
ಜಲ ಯುಕ್ತಿ ಶಿವರ್ ಕೃಷಿ ಕೊಳಗಳ ಮತ್ತು ಪ್ರಸ್ತುತ ಅನುಷ್ಠಾನದಲ್ಲಿರುವ ನೀರಾವರಿ ಯೋಜನೆಗಳ ಯಶಸ್ಸಿನ ಬಗ್ಗೆ ವಿವರಿಸಿದ ಅವರು, ಮರಾಠವಾಡ ವಾಟರ್ಗ್ರಿಡ್ ಪ್ರಾಜೆಕ್ಟ್ಗಾಗಿ ಸಿದ್ಧತೆಗಳು ನಡೆಯುತ್ತಿದೆ ಎಂದರು.
ಜಲ್ ಯುಕ್ತ್ ಶಿವರ್ ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದು ಬತ್ತಿದ ತೊರೆಗಳಲ್ಲಿ ಒರತೆ ಹೆಚ್ಚುವಂತೆ ಮಾಡುವುದು ಮತ್ತು ಕೃಷಿ ಕೊಳಗಳನ್ನು ಪ್ರೋತ್ಸಾಹಿಸುತ್ತದೆ.
ಟ್ಯಾಂಕರ್ಗಳ, ಮೇವು ಶಿಬಿರಗಳ ನಿಯೋಜನೆ ಮತ್ತು ಬೃಹತ್ ಗಿಡ ನೆಡುವಿಕೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಬರವನ್ನು ತಗ್ಗಿಸಲು ನಮ್ಮ ಸರ್ಕಾರ ಕ್ರಮಗಳನ್ನು ತೆಗೆದುಕೊಂಡ ಬಗ್ಗೆಯೂ ಫಡ್ನವೀಸ್ ಮಾತನಾಡಿದರು.
ಬರ ಪರಿಸ್ಥಿತಿಯನ್ನು ನಿಭಾಯಿಸಲು ಈ ವರ್ಷ ಮಹಾರಾಷ್ಟ್ರಕ್ಕೆ ಅತ್ಯಧಿಕ ಸಹಾಯ ನೀಡಿದಕ್ಕಾಗಿ ಅವರು ಕೇಂದ್ರಕ್ಕೆ ಧನ್ಯವಾದ ಅರ್ಪಿಸಿದರು.
“ಇದುವರೆಗೆ 4,248.59 ಕೋಟಿ ರೂ. ನೆರವು ಕೇಂದ್ರದಿಂದ ಬಂದಿದೆ ಮತ್ತು ಇದನ್ನು ರೈತರಿಗೆ ವಿತರಿಸಲಾಗಿದೆ” ಎಂದು ಅವರು ಹೇಳಿದರು.
ಮಹಾರಾಷ್ಟ್ರ ಸರ್ಕಾರವು ನಗರಗಳಲ್ಲಿ ಮಳೆನೀರು ಕೊಯ್ಲು ಮಾಡುವ ಪ್ರಯತ್ನಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ, ಮುಂಬಯಿ, ನವೀ ಮುಂಬಯಿ, ನಾಗ್ಪುರ, ಪಿಂಪ್ರಿ-ಚಿಂಚ್ವಾಡ್, ಪುಣೆ ಮತ್ತು ಥಾಣೆ ಪುರಸಭೆಯ ಪ್ರಮುಖ ನಗರಗಳಲ್ಲಿ ಇಂತಹ 13,277 ಮಳೆ ನೀರು ಕೊಯ್ಲು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.