ಮುಂಬಯಿ: ಮಹಾರಾಷ್ಟ್ರದ ಆರು ಜಿಲ್ಲೆಗಳು ಮುಂದಿನ 5 ವರ್ಷದಲ್ಲಿ ಡಿಸೇಲ್ ಮುಕ್ತವಾಗಲಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ತಿಳಿಸಿದ್ದಾರೆ.
ಸಿಐಐ ನ್ಯಾಷನಲ್ ಕೌನ್ಸೆಲಿಂಗ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ” ನಾಗ್ಪುರ, ಬಾಂದ್ರಾ, ಗೋಂಡಿಯಾ, ಚಂದ್ರಪುರ, ಗೋಡ್ಚಿರೋಲಿ ಮತ್ತು ವಾರ್ಧಾ ಜಿಲ್ಲೆಗಳನ್ನು ಡಿಸೇಲ್ ಮುಕ್ತಗೊಳಿಸಲು ನಾನು ಯೋಜನೆಗಳನ್ನು ರೂಪಿಸಿದ್ದೇನೆ. ಐದು ವರ್ಷಗಳೊಳಗೆ ಈ ಆರು ಜಿಲ್ಲೆಗಳಲ್ಲಿ ಒಂದೇ ಒಂದು ಡ್ರಾಪ್ಸ್ ಡಿಸೇಲ್ ಕೂಡ ಲಭ್ಯವಿರದಂತೆ ಮಾಡುವುದು ನಮ್ಮ ಗುರಿಯಾಗಿದೆ. ಇದು ಅತ್ಯಂತ ಕಠಿಣವಾದ ಕಾರ್ಯ, ಆದರೆ ಟ್ರಕ್ ಮತ್ತು ಬಸ್ಗಳಿಗಾಗಿ ಬಯೋ-ಸಿಎನ್ಜಿ ತಯಾರಿಸುವ ಆರು ಫ್ಯಾಕ್ಟರಿಗಳನ್ನು ನಾನು ಸ್ಥಾಪನೆ ಮಾಡಿದ್ದೇನೆ. ಪ್ರಸ್ತುತ, 50 ಬಸ್ಗಳು ಇದರ ಮೂಲಕ ಓಡುತ್ತಿವೆ, ಭವಿಷ್ಯದಲ್ಲಿ ಆರ್ಗ್ಯಾನಿಕ್ ಫಾರ್ಮಿಂಗ್ ಕೂಡ ಇರಲಿದೆ” ಎಂದಿದ್ದಾರೆ.
ಈ ಕಾರ್ಯಕ್ಕೆ ಬ್ಯಾಂಕುಗಳನ್ನು ಹೊರತುಪಡಿಸಿಯೂ ಇತರ ಪರ್ಯಾಯ ಮಾರ್ಗಗಳನ್ನು ಹುಡುಕುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದಿರುವ ಅವರು, ಮುಂದಿನ ಐದು ವರ್ಷಗಳಲ್ಲಿ ಸಾರಿಗೆ ವಲಯದಲ್ಲಿ ರೂ.17 ಲಕ್ಷ ಹೂಡಿಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಯ ಸಚಿವರೂ ಆಗಿರುವ ಅವರು, “ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಪ್ರಗತಿ ಕಾಣುವ ಸಂಭಾವ್ಯತೆಯನ್ನು ಹೊಂದಿದೆ ಮತ್ತು ದೇಶದ ಪ್ರಗತಿಗೆ ಕೊಡುಗೆಯನ್ನೂ ನೀಡಲಿವೆ. ಈ ನಿಟ್ಟಿನಲ್ಲಿ ಖಾಸಗಿ ವಲಯದ ಸಹಾಯ ಬಹಳ ಮುಖ್ಯ” ಎಂದಿದ್ದಾರೆ.
“ಕೈಗಾರಿಕೆಗಳ ಸಲಹೆಯಂತೆ ನಾವು ಸುಧಾರಣೆಗಳನ್ನು ತರುತ್ತೇವೆ ಮತ್ತು ಹೆಚ್ಚಿನ ಶಿಫಾರಸ್ಸುಗಳಿಗಾಗಿ ಮನವಿಯನ್ನು ಮಾಡಿಕೊಳ್ಳುತ್ತೇವೆ. ಕೇಂದ್ರ ಸರ್ಕಾರ ಅತ್ಯಂತ ಸಕಾರಾತ್ಮಕವಾಗಿದ್ದು, ಕೈಗಾರಿಕೆಗಳಲ್ಲಿ ಹೆಚ್ಚು ನಂಬಿಕೆ ಮತ್ತು ಭರವಸೆಯನ್ನು ಇಟ್ಟುಕೊಂಡಿದೆ. ಸರ್ಕಾರ ಹೂಡಿಕೆ ಸ್ನೇಹಿಯಾಗಿದೆ ಮತ್ತು ಉದ್ಯೋಗ, ಪ್ರಗತಿ ಮತ್ತು ರಫ್ತುಗಳಿಗಾಗಿ ಕೈಗಾರಿಕೆಗಳ ಬೆಂಬಲವನ್ನು ನಿರೀಕ್ಷೆ ಮಾಡುತ್ತಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.