ಹೈದರಾಬಾದ್: ಹಿಂದೂಗಳ ಪವಿತ್ರ ಕ್ಷೇತ್ರದ ಸಮೀಪದಲ್ಲಿದ್ದ ಅರಣ್ಯ ಭೂಮಿಯಲ್ಲಿ ಕ್ರಿಶ್ಚಿಯನ್ ಮಿಶನರಿಗಳು ಅಕ್ರಮವಾಗಿ ಕಟ್ಟುತ್ತಿದ್ದ ಚರ್ಚ್ವೊಂದನ್ನು ಆಂಧ್ರಪ್ರದೇಶದ ಸರ್ಕಾರಿ ಅಧಿಕಾರಿಗಳು ಕೆಡವಿ ಹಾಕಿದ್ದಾರೆ. ನಾಗರಿಕ ಹೋರಾಟ ಸಂಘಟನೆ ಲೀಗಲ್ ರೈಟ್ಸ್ ಪ್ರೊಟೆಕ್ಷನ್ ಫೋರಂ ನಡೆಸಿದ ಕಾನೂನು ಹೋರಾಟದ ಫಲವಾಗಿ ಚರ್ಚ್ ಅನ್ನು ಧ್ವಂಸ ಮಾಡಲಾಗಿದೆ.
ಆಂಧ್ರಪ್ರದೇಶನ ಕರ್ನೂಲ್ ಜಿಲ್ಲೆಯ ಶ್ರೀ ಲಕ್ಷ್ಮೀ ಜಗನ್ನಾಥ ಗಟ್ಟು ದೇಗುಲದ ಸಮೀಪದಲ್ಲಿರುವ ಅರಣ್ಯ ಭೂಮಿಯಲ್ಲಿ ಕ್ರಿಶ್ಚಿಯನ್ ಮಿಶನರಿಗಳು ಅಕ್ರಮವಾಗಿ ಚರ್ಚ್ ನಿರ್ಮಾಣ ಮಾಡುತ್ತಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಈ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದಾಗಿದೆ.
ನಾಲ್ಕು ವರ್ಷಗಳ ಹಿಂದೆ ಇಲ್ಲಿ ಬೃಹದಾಕಾರದ ಕ್ರಾಸ್ ಒಂದನ್ನು ಸ್ಥಾಪನೆ ಮಾಡಲಾಗಿತ್ತು, ಇತ್ತೀಚಿಗಷ್ಟೇ ಇಲ್ಲಿ ಚರ್ಚ್ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಇದರ ವಿರುದ್ಧ ಲೀಗಲ್ ರೈಟ್ಸ್ ಪ್ರೊಟೆಕ್ಷನ್ ಫೋರಂ ಚರ್ಚ್ ಮತ್ತು ಕ್ರಾಸ್ ಎರಡರ ವಿರುದ್ಧವೂ ಫಾರೆಸ್ಟ್ ಪ್ರೊಟೆಕ್ಷನ್ ಡಿವಿಶನ್ ಗೆ ದೂರನ್ನು ಸಲ್ಲಿಸಿತ್ತು.
ಬಳಿಕ ದೊಡ್ಡ ಮಟ್ಟದಲ್ಲೇ ಇದರ ವಿರುದ್ಧ ಅಭಿಯಾನವನ್ನು ನಡೆಸಲಾಗಿತ್ತು, ಇದರ ಫಲವಾಗಿ ಸರ್ಕಾರಿ ಅಧಿಕಾರಿಗಳು ನಿರ್ಮಾಣ ಹಂತದಲ್ಲಿದ್ದ ಚರ್ಚ್ ಅನ್ನು ಧ್ವಂಸ ಮಾಡಿದ್ದಾರೆ. ಇದರ ವೀಡಿಯೋವನ್ನು ಹರಿ ಬಿಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.