ನವದೆಹಲಿ: ಮಾತನಾಡುವ ಭಾಷೆಯಾಗಿ ಸಂಸ್ಕೃತವನ್ನು ಪ್ರಚಾರಪಡಿಸುವ ಸಲುವಾಗಿ, ಕನಿಷ್ಠ ಎರಡು ಸಂಸ್ಕೃತ ಭಾಷಿಕ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಕ್ರಿಯಾಲ್ ಉತ್ಸುಕತೆಯನ್ನು ತೋರಿದ್ದಾರೆ.
ಮಾನವ ಸಂಪನ್ಮೂಲ ಸಚಿವಾಲಯದಡಿಯಲ್ಲಿರುವ ಸೆಂಟ್ರಲ್ ಲ್ಯಾಂಗ್ವೇಜ್ ಇನ್ಸ್ಟಿಟ್ಯೂಶನ್ಗಳ ಮುಖ್ಯಸ್ಥರ ಸಭೆಯನ್ನು ನಡೆಸಿದ ಸಚಿವರು, ಎಲ್ಲಾ ಭಾರತೀಯ ಭಾಷೆಗಳನ್ನು ಪ್ರಚಾರಪಡಿಸಲು ಗಮನ ನೀಡಲಾಗುವುದು, ಇದಕ್ಕಾಗಿ ಇನ್ಸ್ಟಿಟ್ಯೂಶನ್ಗಳಲ್ಲಿನ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಎಲ್ಲಾ ಲ್ಯಾಂಗ್ವೇಜ್ ಇನ್ಸ್ಟಿಟ್ಯೂಶನ್ಗಳು ಬಲಿಷ್ಠ ಮತ್ತು ಸಮರ್ಥವಾಗಿರಬೇಕು ಎಂದರು.
ಅಲ್ಲದೇ, ಇನ್ಸ್ಟಿಟ್ಯೂಶನ್ಗಳ ಮುಖ್ಯಸ್ಥರುಗಳೊಂದಿಗೆ ನಿರಂತರವಾಗಿ ಸಭೆಗಳನ್ನು ನಡೆಸುವಂತೆ ಅವರು ಸಚಿವಾಲಯದ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಸ್ಕೃತವನ್ನು ಪ್ರಚುರಪಡಿಸಲು ಮತ್ತು ಆ ಭಾಷೆಗೆ ಹೊಸ ಆಯಾಮವನ್ನು ನೀಡಲು ಹೆಚ್ಚು ಗುಣಮಟ್ಟದ ಶಿಕ್ಷಕರನ್ನು ಮತ್ತು ಅಧ್ಯಾಪಕರನ್ನು ಕಾರ್ಯೋನ್ಮೂಗೊಳಿಸಬೇಕಿದೆ ಎಂದು ಸಚಿವರು ಪ್ರತಿಪಾದಿಸಿದ್ದಾರೆ.
ದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ, ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ಮತ್ತು ತಿರುಪತಿಯಲ್ಲಿರುವ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ 3,500 ವರ್ಷಗಳಿಗಿಂತಲೂ ಹೆಚ್ಚು ಕಾಲಗಳಿಂದ ಸಂಸ್ಕೃತ ಭಾಷೆಯನ್ನು ಪ್ರಚಾರ ಮಾಡುತ್ತಾ ಬರುತ್ತಿರುವ ಪ್ರಮುಖ ಸಂಸ್ಕೃತ ಕೇಂದ್ರಗಳಾಗಿವೆ.
ಭಾಷೆಯನ್ನು ಪ್ರಚಾರಪಡಿಸಲು ಹೆಚ್ಚು ನಾವೀಣ್ಯ ಮಾರ್ಗಗಳನ್ನು ಅನುಸರಿಸುವ ಅಗತ್ಯವಿದೆ. ವಿವಿಧ ಭಾರತೀಯ ಭಾಷೆಗಳಲ್ಲಿ ಇರುವ ಸಾಹಿತ್ಯಗಳನ್ನು ಇತರ ಭಾಷೆಗಳಿಗೆ ಅನುವಾದಿಸಬೇಕು, ಇದರಿಂದ ಸಮಾಜದ ಎಲ್ಲಾ ವರ್ಗದ ಜನರಿಗೂ ಇದನ್ನು ಓದಲು ಸಾಧ್ಯವಾಗುತ್ತದೆ ಎಂದರು.
ಮುಂಬರುವ ವರ್ಷಗಳಲ್ಲಿ ಸಚಿವಾಲಯವು ಭಾಷಾ ಭವನವನ್ನು ಸ್ಥಾಪನೆ ಮಾಡಲಿದ್ದು, ಇಲ್ಲಿ ಎಲ್ಲಾ ಭಾರತೀಯ ಭಾಷೆಯ ಸಂಸ್ಥೆಗಳು ಕಛೇರಿಯನ್ನು ಹೊಂದಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.