ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಪತನಗೊಂಡಿರುವ ವಾಯುಸೇನೆಯ AN-32 ವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ ಎಂಬುದನ್ನು ಭಾರತೀಯ ವಾಯುಸೇನೆ ಇಂದು ಖಚಿತಪಡಿಸಿದೆ. ಜೂನ್ 3ರಂದು ನಾಪತ್ತೆಯಾಗಿದ್ದ ವಿಮಾನದ ಅವಶೇಷಗಳು ಜೂನ್ 11ರಂದು ಪತ್ತೆಯಾಗಿದ್ದವು.
ಟ್ವಿಟ್ ಮಾಡಿರುವ ವಾಯುಸೇನೆ, “ಅವಶೇಷಗಳು ಪತ್ತೆಯಾದ ಜಾಗಕ್ಕೆ ರಕ್ಷಣಾ ತಂಡದ 8 ಮಂದಿಯನ್ನು ಕಳುಹಿಸಿ ಶೋಧ ಕಾರ್ಯ ನಡೆಸಲಾಯಿತು, ಆದರೆ ವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ” ಎಂದಿದೆ.
ಸೋವಿಯತ್-ವಿನ್ಯಾಸದ ಅವಳಿ ಎಂಜಿನ್ ಟರ್ಬೊಪ್ರೊಪ್ ಟ್ರಾನ್ಸ್ಪೋರ್ಟ್ ವಿಮಾನ ಇದಾಗಿತ್ತು, ಜೂನ್ 3ರಂದು ಮಧ್ಯಾಹ್ನ ಅಸ್ಸಾಂನ ಜೋಹರ್ತ್ನಿಂದ ಅರುಣಾಚಲದಲ್ಲಿನ ಮಿಲಿಟರಿ ಲ್ಯಾಂಡಿಂಗ್ ಸ್ಟ್ರಿಪ್ ಮೆಚುಕ್ಗೆ ಇದು ಹಾರಾಟ ಆರಂಭಿಸಿತ್ತು. ಆದರೆ ಮಾರ್ಗ ಮಧ್ಯೆಯೇ ಇದು ನಾಪತ್ತೆಯಾಗಿತ್ತು.
ಮಂಗಳವಾರ 12 ಸಾವಿರ ಅಡಿ ಆಳದ ದಟ್ಟಾರಣ್ಯದಲ್ಲಿ ಇದರ ಅವಶೇಷ ಕಾಣಿಸಿಕೊಂಡಿತ್ತು. ಇಲ್ಲಿಗೆ ರಕ್ಷಣಾ ತಂಡವನ್ನು ವಾಯುಸೇನೆ ಏರ್ಡ್ರಾಪ್ ಮಾಡಿತ್ತು. ಆದರೀಗ ಯಾರೂ ಬದುಕುಳಿದಿಲ್ಲ ಎಂಬ ಮಾಹಿತಿಯನ್ನು ಮೃತರ ಕುಟುಂಬಿಕರಿಗೆ ರವಾನಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.