ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ನೂತನ ಸರ್ಕಾರದ ಮೊದಲ ಮಂತ್ರಿ ಮಂಡಲದ ಸಭೆಯನ್ನು ನಡೆಸಿದ್ದು, ಇದರಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಬಗ್ಗೆ ಸಚಿವರುಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ್ದಾರೆ. ಸಮಯಕ್ಕೆ ಸರಿಯಾಗಿ, ನಿರಂತರವಾಗಿ ಕಛೇರಿಗೆ ಬರುವಂತೆ ಮತ್ತು ಮನೆಯಿಂದಲೇ ಕೆಲಸ ಮಾಡುವುದನ್ನು ಕಡಿಮೆ ಮಾಡುವಂತೆ ಅವರು ಕಟ್ಟಪ್ಪಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊದಲ ಬಾರಿಗೆ ಸಚಿವರುಗಳಾದವರಿಗೆ ಮಾರ್ಗದರ್ಶನ ನೀಡುವಂತೆ, ಅವರಿಗೆ ಕೆಲಸಗಳನ್ನು ನೀಡುವಂತೆ ಹಿರಿಯ ಸಚಿವರುಗಳಿಗೆ ಮೋದಿ ಸೂಚಿಸಿದ್ದಾರೆ. ಫಲದಾಯಕತೆಯನ್ನು ಹೆಚ್ಚಿಸುವ ಸಲುವಾಗಿ ಸಂಪುಟ ಸಚಿವರುಗಳು ತಮ್ಮ ಕಿರಿಯರೊಂದಿಗೆ ದಾಖಲೆಗಳನ್ನು ಹಂಚಿಕೊಳ್ಳಬೇಕು, ಪ್ರಸ್ತಾವಣೆಗಳಿಗೆ ಅನುಮೋದನೆಯನ್ನು ನೀಡಲು ಅವರೊಂದಿಗೆ ಚರ್ಚೆ ನಡೆಸಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಪಕ್ಷದ ಕಾರ್ಯಕರ್ತರನ್ನು, ಶಾಸಕರನ್ನು ನಿರಂತರವಾಗಿ ಭೇಟಿಯಾಗಲು ದಿನವನ್ನು ನಿಗದಿಪಡಿಸುವಂತೆ ತಿಳಿಸಿದ್ದಾರೆ. ಮಾತ್ರವಲ್ಲದೇ, ಯಾವಾಗೆಲ್ಲಾ ಪಕ್ಷದ ಶಾಸಕರು, ಸಚಿವರು, ಕಾರ್ಯಕರ್ತರು ಭೇಟಿಗೆ ಅವಕಾಶ ಕೇಳುತ್ತಾರೋ ಆವಾಗೆಲ್ಲಾ ಅವಕಾಶಗಳನ್ನು ನೀಡುವಂತೆ ತಿಳಿಸಿದ್ದಾರೆ.
ಕಛೇರಿಯಲ್ಲೇ ಕೆಲಸ ಮಾಡಬೇಕು, ಮನೆಯಲ್ಲಿ ಅಲ್ಲ ಎಂದು ಸಚಿವರುಗಳಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ನಿತ್ಯ ಬೇಗನೇ ಎದ್ದು ಕೆಲಸ ಮಾಡುವುದಕ್ಕೆ, ಸುದೀರ್ಘ ಅವಧಿಯವರೆಗೆ ಕೆಲಸ ಮಾಡುವುದಕ್ಕೆ ಹೆಸರಾಗಿರುವ ಮೋದಿಯವರು, ಇತರ ಸಚಿವರುಗಳಿಗೂ ಬೆಳಿಗ್ಗೆ 9.30ರ ಹೊತ್ತಿಗೆ ಕಛೇರಿಯಲ್ಲಿರಬೇಕು ಎಂದು ಆದೇಶಿಸಿದ್ದಾರೆ.
ಪ್ರತಿ ಸಚಿವಾಲಯವೂ ಐದು ವರ್ಷಗಳ ಅಜೆಂಡಾ ರೂಪಿಸುವಂತೆ ಅವರು ತಿಳಿಸಿದ್ದು, ಮೊದಲ 100 ದಿನಗಳಲ್ಲೇ ಪರಿಣಾಮಕಾರಿಯಾದ ನಿರ್ಧಾರಗಳು ಹೊರಬರಬೇಕು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.