ನವದೆಹಲಿ: ದೇಶದ ವಿವಿಧ ನಗರಗಳು ಮತ್ತು ಹೆದ್ದಾರಿಗಳಲ್ಲಿ ಸುಮಾರು 5,000 ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಶನ್ ಗಳನ್ನು ನಿರ್ಮಾಣ ಮಾಡುವ ಸಲುವಾಗಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸಬ್ಸಿಡಿಯನ್ನು ಒದಗಿಸುವ ಎರಡು ದೊಡ್ಡ ಮಟ್ಟದ ಪ್ರಸ್ತಾವಣೆಗಳನ್ನು ತರುವ ನಿರೀಕ್ಷೆ ಇದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ನಗರದ ಪ್ರತಿ 3 ಕಿಲೋಮೀಟರ್ ಗಳಿಗೆ ಒಂದರಂತೆ ಚಾರ್ಜಿಂಗ್ ಸ್ಟೇಶನ್ ಗಳನ್ನು ಮತ್ತು ಹೆದ್ದಾರಿಗಳ ಬದಿಗಳಲ್ಲಿ 25 ಕಿಮೀಗೆ ಒಂದರಂತೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಶನ್ ಗಳನ್ನು ಸ್ಥಾಪನೆ ಮಾಡುವ ಗುರಿಯನ್ನು ಕೇಂದ್ರ ಹೊಂದಿದೆ ಎಂದು ಹೇಳಲಾಗಿದೆ.
40% ನಷ್ಟು ಫ್ಲೀಟ್ ಗಳನ್ನು ಬ್ಯಾಟರಿ-ಚಾಲಿತ ವಾಹನಗಳಾಗಿ ಪರಿವರ್ತಿಸುವ ಯೋಜನೆಯನ್ನು ತ್ವರಿತಗೊಳಿಸಲು ಸರ್ಕಾರ ಬಯಸಿದೆ. ಪ್ರಸ್ತುತ, ಭಾರತದಾದ್ಯಂತ 150 ಚಾರ್ಜಿಂಗ್ ಕೇಂದ್ರಗಳಿವೆ.
ಬೃಹತ್ ಕೈಗಾರಿಕಾ ಇಲಾಖೆಯು ನಗರಗಳು ಮತ್ತು ಹೆದ್ದಾರಿಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಅವಕಾಶಗಳನ್ನು ನೀಡಲಿದೆ. ಸಬ್ಸಿಡಿಗಳನ್ನು ಪಡೆಯಲು ಬಯಸುವ ರಾಜ್ಯಗಳು ತಮ್ಮ ಪ್ರಸ್ತಾಪಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಹೆಚ್ಚಾಗಿ ವಿದ್ಯುತ್ ವಿತರಣಾ ಕಂಪನಿಗಳ ಮೂಲಕ ಪ್ರಸ್ತಾಪ ಸಲ್ಲಿಸಲು ಕೋರಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.