ಬ್ರಿಟಿಷರಿಂದ ಭಾರತವನ್ನು ಸ್ವತಂತ್ರಗೊಳಿಸಲು ಹಲವಾರು ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಇಂತಹ ವೀರರ ಸಾಲಿನಲ್ಲಿ ಮಕ್ಕಳು ಕೂಡ ಸೇರಿದ್ದಾರೆ. ಅವರ ಬಗೆಗಿನ ಕಥೆಗಳು, ತ್ಯಾಗಿಗಳ ಭೂಮಿಯಲ್ಲಿ ಜನಿಸಿದ್ದೇವೆ ಎಂಬ ಹೆಮ್ಮೆಯನ್ನುಂಟು ಮಾಡುತ್ತದೆ. ತಾಯಿ ಭಾರತೀಯನ್ನು ಸ್ವತಂತ್ರಳನ್ನಾಗಿಸಲು ಪ್ರಾಣತ್ಯಾಗ ಮಾಡಿದ ಮೂರು ಮಕ್ಕಳ ಕಥೆ ಇಲ್ಲಿದೆ, ಈ ಕಥೆಗಳು ನಮ್ಮ ಹೃದಯ ತುಂಬಿ ಬರುವಂತೆ ಮಾಡುತ್ತವೆ.
ಬಾಜಿ ರಾವತ್
ಈ ಮಣ್ಣಿನಲ್ಲಿ ಹುತಾತ್ಮರಾದ ಅತ್ಯಂತ ಕಿರಿಯ ವ್ಯಕ್ತಿ ಬಾಜಿರಾವ್ ರಾವತ್. ಪ್ರಾಣತ್ಯಾಗ ಮಾಡುವಾಗ ಅವರ ವಯಸ್ಸು ಕೇವಲ ಹನ್ನೆರಡು ವರುಷ . ಒರಿಸ್ಸಾದ ಬ್ರಹ್ಮಣಿ ನದಿಯಲ್ಲಿ ಅಂಬಿಗನಾಗಿದ್ದ ಸೇವೆ ಸಲ್ಲಿಸುತ್ತಿದ್ದ ತಂದೆಯ ಕಿರಿಯ ಮಗ ಈತನಾಗಿದ್ದ.
ಚಿಕ್ಕ ವಯಸ್ಸಲ್ಲೇ ಜನರ ಪಕ್ಷ ಬನರ್ ಸೇನಿ ಪ್ರಜಾಮಂಡಲದ ಸಕ್ರಿಯ ಸದಸ್ಯನಾಗಿದ್ದ ಈತ, ರಾತ್ರಿ ವೇಳೆ ನದಿಯಲ್ಲಿ ಕಾವಲು ಕಾಯುತ್ತಿದ್ದ. 1938ರ ಅಕ್ಟೋಬರ್ 11 ರಂದು ದೆನ್ಕನಲ್ ಜಿಲ್ಲೆಯ ಭುಬನ್ ಪ್ರದೇಶದ ನೀಲ ಕಾಂತಪುರ ಘಾಟ್ ಸಮೀಪ ಬ್ರಿಟಿಷ್ ಪೊಲೀಸ್ ಪಡೆ ತಮ್ಮನ್ನು ದೋಣಿ ಮೂಲಕ ನದಿಯ ಆಚೆ ಬದಿಗೆ ಕರೆದೊಯ್ಯುವಂತೆ ಈತನಿಗೆ ಸೂಚಿಸಿತ್ತು. ಆದರೆ ಈತ ಅವರ ಸೂಚನೆಯನ್ನು ಪಾಲಿಸಲು ಸುತಾರಂ ಒಪ್ಪಲಿಲ್ಲ, ಹೀಗಾಗಿ ಬ್ರಿಟಿಷ್ ಪೊಲೀಸರು ಈತ ಮತ್ತು ಇನ್ನಿಬ್ಬರು ಅಂಬಿಗರನ್ನು ಅಮಾನುಷವಾಗಿ ಗುಂಡಿಟ್ಟು ಹತ್ಯೆ ಮಾಡಿದರು.
ಕೋಡಿ ಕಾಥ ಕುಮಾರನ್
ತಮಿಳುನಾಡಿನ ಕೊಯಂಬತ್ತೂರು ಸಮೀಪದ ತಿರುಪುರ್, ಕುಮಾರನ್ ಅವರ ಊರು. 1932ರಲ್ಲಿ ಬ್ರಿಟಿಷರ ವಿರುದ್ಧ ಕುಮಾರನ್ ಪ್ರತಿಭಟನಾ ಸಮಾವೇಶ ಆಯೋಜಿಸಿದ್ದರು. ಬ್ರಿಟಿಷರು ನಿಷೇಧಿಸಿದ್ದ ಭಾರತದ ಧ್ವಜವನ್ನು ಇವರು ಹಿಡಿದುಕೊಂಡಿದ್ದರು. ಇದರಿಂದ ಕುಪಿತಗೊಂಡ ಬ್ರಿಟಿಷರು ಕುಮಾರನ್ ಮತ್ತು ಇತರ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ನಡೆಸಿ, ಧ್ವಜವನ್ನು ಬಿಸಾಕುವಂತೆ ಆದೇಶಿಸಿದರು.
ಆದರೆ ಕುಮಾರನ್ ಎಷ್ಟೇ ಪೆಟ್ಟು ತಿಂದರೂ ಧ್ವಜವನ್ನು ಬಿಸಾಕಲೇ ಇಲ್ಲ. ತೀವ್ರ ಸ್ವರೂಪದಲ್ಲಿ ಗಾಯಗೊಂಡು, ತಲೆ ತಿರುಗಿ ಬಿದ್ದು ಕೊನೆಗೆ ಸತ್ತರೂ ಆತ ಭಾರತದ ಧ್ವಜ ನೆಲಕ್ಕೆ ಬೀಳದಂತೆ ನೋಡಿಕೊಂಡ. ಈ ಪರಾಕ್ರಮಕ್ಕಾಗಿ ಆತನಿಗೆ ಕೋಡಿ ಕಥಾ ಕುಮಾರನ್-ರಾಷ್ಟ್ರ ಧ್ವಜದ ಸಂರಕ್ಷಕ ಕುಮಾರನ್ ಎಂದು ಬಿರುದನ್ನು ನೀಡಲಾಗಿದೆ.
ಕುದಿರಾಮ್ ಬೋಸ್
ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಅಪಾರ ಕೊಡುಗೆಯನ್ನು ನೀಡಿದ್ದಕ್ಕಾಗಿ ಬ್ರಿಟಿಷರು ಇವರನ್ನು ನೇಣುಗಂಬಕ್ಕೆ ಏರಿಸಿದರು. ಆಗ ಇವರ ವಯಸ್ಸು ಕೇವಲ 18 ವರ್ಷ. ಕೋಲ್ಕತ್ತಾ ಪ್ರೆಸಿಡೆನ್ಸಿಯ ಮುಖ್ಯ ಮ್ಯಾಜಿಸ್ಟ್ರೇಟ್ ಆಗಿದ್ದ ಮ್ಯಾಜಿಸ್ಟ್ರೇಟ್ ಕಿಂಗ್ಸ್ಫೋಡ್, ಯುವ ಸ್ವಾತಂತ್ರ್ಯ ಹೋರಾಟಗಾರರಿಗೆ ಅಮಾನುಷ ಶಿಕ್ಷೆಗಳನ್ನು ನೀಡುವುದಕ್ಕೆ ಹೆಸರಾಗಿದ್ದ. ದೈಹಿಕವಾಗಿ ಈತ ಚಿತ್ರವಿಚಿತ್ರ ಹಿಂಸೆಯನ್ನು ನೀಡುತ್ತಿದ್ದ. 1908ರಲ್ಲಿ ಕುದಿರಾಮ್ರನ್ನು ಮ್ಯಾಜಿಸ್ಟ್ರೇಟ್ ಕಿಂಗ್ಸ್ಫೋಡ್ನನ್ನು ಹತ್ಯೆ ಮಾಡಲು ನಿಯೋಜನೆಗೊಳಿಸಲಾಗಿತ್ತು.
1908ರ ಎಪ್ರಿಲ್ 20ರಂದು ಯುರೋಪಿಯನ್ ಕ್ಲಬ್ ಹೊರಗಡೆ ಕಿಂಗ್ಸ್ಫೋಡ್ ಅವರನ್ನು ಹೊತ್ತೊಯ್ಯುತ್ತಿದೆ ಎಂದು ನಂಬಲಾಗಿದ್ದ ಕ್ಯಾರಿಯೇಜ್ ಮೇಲೆ ಬೊಸ್ ಬಾಂಬ್ ದಾಳಿ ನಡೆಸಿದರು. ಆದರೆ ದುರಾದೃಷ್ಟವಶಾತ್ ಈ ಕ್ಯಾರಿಯೇಜ್ ನಲ್ಲಿ ಬ್ಯಾರಿಸ್ಟರ್ ಪ್ರಿಂಗಲ್ ಕೆನಡಿಯವರ ಪತ್ನಿ ಮತ್ತು ಮಗಳಿದ್ದರು. ಈ ಘಟನೆ ನಡೆದ ಬಳಿಕ ಬೋಸ್ ಅವರನ್ನು ವೈನಿ ರೈಲ್ವೇ ಸ್ಟೇಶನಿನಲ್ಲಿ ಬಂಧಿಸಲಾಯಿತು, 1908ರ ಎಪ್ರಿಲ್ 11ರಂದು ಅವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಯಿತು. ಇವರ ಸಹವರ್ತಿಯಾಗಿದ್ದ ಪ್ರಫುಲ್ಲಾ ಚಕಿ ಅವರು ಬ್ರಿಟಿಷರ ಕೈಗೆ ಸಿಕ್ಕಿ ಬೀಳುವ ಮುನ್ನವೇ ಆತ್ಮಹತ್ಯೆ ಮಾಡಿಕೊಂಡು ಮೃತರಾಗಿದ್ದರು. ಬೋಸ್ ನೇಣುಗಂಬಕ್ಕೆ ನಗುನಗುತ್ತಲೇ ಬಂದು ತಲೆ ಎತ್ತಿ ಸಾವನ್ನು ಸ್ವೀಕರಿಸಿದರು. ‘ವಂದೇ ಮಾತರಂ’ ಎಂದು ನ್ಯಾಯಾಲಯದಲ್ಲೂ, ಬಂಧಿಯಾಗುವ ಸಂದರ್ಭದಲ್ಲೂ ಉದ್ಘೋಷ ಹಾಕಿದ ಮಹಾnf ಸಾಹಸಮಯಿ ಬೋಸ್. ಆತನಿಗೆ ಭಯ ಏನೆಂದು ಗೊತ್ತಿರಲಿಲ್ಲ, ಗೊತ್ತಿದ್ದದ್ದು ಭಾರತದ ಬಗೆಗಿನ ಪ್ರೀತಿಯಷ್ಟೇ. ಆದರೆ ಇಂದು ‘ವಂದೇ ಮಾತರಂ’ ಎಂದು ಹೇಳಲು ನಾಚಿಕೆ ಪಟ್ಟುಕೊಳ್ಳುವವರನ್ನು ನಾವು ಕಾಣುತ್ತಿದ್ದೇವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.