ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಭಾರತದ ಎರಡನೇಯ ಚಂದ್ರಯಾನ ಯೋಜನೆಯನ್ನು ಆರಂಭಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಜುಲೈ ತಿಂಗಳಿನಲ್ಲಿ ಚಂದ್ರಯಾ-2 ನಡೆಯಲಿದೆ. ಬುಧವಾರ ಇಸ್ರೋ, ತನ್ನ ಸ್ಯಾಟಲೈಟ್ ಇಂಟಿಗ್ರೇಶನ್ ಆ್ಯಂಡ್ ಟೆಸ್ಟಿಂಗ್ ಎಸ್ಟಾಬ್ಲಿಷ್ಮೆಂಟ್ನಲ್ಲಿರುವ ಚಂದ್ರಯಾನ-2 ಲ್ಯಾಂಡರ್, ರೋವರ್ ಮತ್ತು ಆರ್ಬಿಟರ್ಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದೆ.
ಆರ್ಬಿಟರ್, ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಗ್ಯಾನ್) ಎಂಬ ಮೂರು ಸಾಧನಗಳನ್ನು ಇದು ಒಳಗೊಂಡಿದೆ. ಆರ್ಬಿಟರ್ ಮತ್ತು ಲ್ಯಾಂಡರ್ ಗಳನ್ನು ಯಾಂತ್ರಿಕವಾಗಿ ಯಾಂತ್ರಿಕವಾಗಿ ಪರಸ್ಪರ ಜೋಡಿಸಲಾಗುವುದು ಮತ್ತು ಇಂಟಿಗ್ರೇಟೆಡ್ ಮಾಡ್ಯೂಲ್ ಆಗಿ ಒಟ್ಟುಗೂಡಿಸಲಾಗುತ್ತದೆ ಮತ್ತು GSLV MK-III ಉಡಾವಣೆ ವಾಹನದೊಳಗೆ ಅಳವಡಿಸಲಾಗುವುದು, ರೋವರ್ ಅನ್ನು ಲ್ಯಾಂಡರ್ ಒಳಗೆ ಇರಿಸಲಾಗುತ್ತದೆ.
ಜುಲೈ 9-16ರ ನಡುವೆ ಚಂದ್ರಯಾನ-2 ಯೋಜನೆಗೆ ಚಾಲನೆ ದೊರಕಲಿದೆ, 2019ರ ಸೆಪ್ಟಂಬರ್ 6ರಂದು ಇದು ಚಂದ್ರನಲ್ಲಿ ಲ್ಯಾಂಡ್ ಆಗುವ ನಿರೀಕ್ಷೆ ಇದೆ.
ಇದೇ ಮೊದಲ ಬಾರಿಗೆ ಇಸ್ರೋ ಸಾರ್ವಜನಿಕರಿಗೆ ಚಂದ್ರಯಾನ-2 ಸಾಧನಗಳ ಫೋಟೋಗಳನ್ನು ವೀಕ್ಷಿಸಲು ಅನುವು ಮಾಡಿಕೊಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.