ನವದೆಹಲಿ: ಜೂನ್ 3ರಂದು ನಾಪತ್ತೆಯಾಗಿದ್ದ ಭಾರತೀಯ ವಾಯುಸೇನೆಯ ಎಎನ್-32 ವಿಮಾನ ಅವಶೇಷಗಳು ಅರುಣಾಚಲ ಪ್ರದೇಶದ ಲಿಪೋದಲ್ಲಿ ಮಂಗಳವಾರ ಪತ್ತೆಯಾಗಿದೆ. ಟ್ವಿಟರ್ ಮೂಲಕ ವಾಯುಸೇನೆ ಈ ವಿಷಯವನ್ನು ದೃಢಪಡಿಸಿದೆ, ಈ ವಿಮಾನದಲ್ಲಿ ಇದ್ದ 13 ಮಂದಿ ಕಣ್ಮರೆಯಾಗಿದ್ದಾರೆ.
ಟ್ವಿಟ್ ಮಾಡಿರುವ ವಾಯುಸೇನೆ, “ನಾಪತ್ತೆಯಾದ ಎಎನ್-32 ವಿಮಾನದ ಅವಶೇಷಗಳು ಲಿಫೋದ ಉತ್ತರ ದಿಕ್ಕಿನಲ್ಲಿ 16 ಕಿಮೀ ದೂರದಲ್ಲಿ ಪತ್ತೆಯಾಗಿದೆ. ವಾಯುಸೇನೆಯ ಮಿ-17 ಹೆಲಿಕಾಫ್ಟರ್ ಇಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತಿದೆ” ಎಂದಿದೆ.
ಸಿಬ್ಬಂದಿಗಳ ಪರಿಸ್ಥಿತಿಯ ಬಗ್ಗೆ ತಿಳಿಯಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ, ಮುಂದಿನ ಬೆಳವಣಿಗೆಯನ್ನು ಕಾರ್ಯಾಚರಣೆಯಲ್ಲಿ ಪ್ರಗತಿ ಕಂಡ ಬಳಿಕ ತಿಳಿಸುತ್ತೇವೆ ಎಂದಿದೆ.
ಜೂನ್ 3ರಂದು ಅಸ್ಸಾಂನ ಜೋರ್ಹತ್ ವಾಯುನೆಲೆಯಿಂದ ಹೊರಟ ಬಳಿಕ ಈ ವಿಮಾನ ನೆಲದ ಸಂಪೂರ್ಣ ಸಂಪರ್ಕವನ್ನು ಕಡಿದುಕೊಂಡಿತ್ತು. ಇದರಲ್ಲಿ 8 ಮಂದಿ ಸಿಬ್ಬಂದಿ ಮತ್ತು ಐದು ಮಂದಿ ಶಸ್ತ್ರಾಸ್ತ್ರ ಪಡೆಗಳ ಸಿಬ್ಬಂದಿಗಳಿದ್ದರು. ಕಳೆದ 8 ದಿನಗಳಿಂದ ಈ ವಿಮಾನಕ್ಕಾಗಿ ತೀವ್ರ ಕಾರ್ಯಾಚರಣೆಯನ್ನು ನಡೆಸಲಾಗುತ್ತಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.