ನವದೆಹಲಿ: ಇದೇ ಮೊದಲ ಬಾರಿಗೆ, ಭಾರತವು ಕ್ಷಿಪಣಿ ಸಾಮರ್ಥ್ಯಗಳನ್ನು ಹೊಂದಿರುವ ಶಸ್ತ್ರಸಜ್ಜಿತ ಗಾರ್ಡಿಯನ್ ದ್ರೋನ್ ಅನ್ನು ಹೊಂದಲಿದೆ. ಅಮೆರಿಕಾ ಭಾರತಕ್ಕೆ ಈ ದ್ರೋನ್ಗಳನ್ನು ಮಾರಾಟ ಮಾಡಲು ಅನುಮತಿಯನ್ನು ನೀಡಿದೆ ಎಂದು ಹೇಳಲಾಗಿದೆ.
ಅಮೆರಿಕಾದ ಜನರಲ್ ಅಟೊಮಿಕ್ಸ್ ತಯಾರಿಸಲ್ಪಟ್ಟ ಪ್ರಿಡೇಟರ್ ದ್ರೋನ್ಗಳ ಸಶಸ್ತ್ರ ಮತ್ತು ಕಣ್ಗಾವಲು ಆವೃತ್ತಿಗಳನ್ನು ಖರೀದಿಸಲು ಭಾರತೀಯ ಸೇನಾ ಪಡೆಗಳು ಪ್ರಯತ್ನಿಸುತ್ತಲೇ ಇವೆ. ಈ ದ್ರೋನ್ ಗಳು ಭಾರತೀಯ ಸಾಗರದಲ್ಲಿ ಕರಾವಳಿ ಕಣ್ಗಾವಲು ಸಾಮರ್ಥ್ಯಗಳನ್ನು ಹೆಚ್ಚಿಸಲಿವೆ ಮತ್ತು ಆಗಸದಲ್ಲಿ, ಸಮುದ್ರದಲ್ಲಿ ಮತ್ತು ಭೂಮಿಗಳಲ್ಲಿ ಟಾರ್ಗೆಟ್ಗಳನ್ನು ಹೊಡೆಯುವ ಸಾಮರ್ಥ್ಯವನ್ನೂ ವೃದ್ಧಿಸಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ, ಭಾರತವು ಯಾವುದೇ ಶಸ್ತ್ರಸಜ್ಜಿತ ದ್ರೋನ್ ಅಥವಾ ಕ್ಷಿಪಣಿಗಳನ್ನು ಗುರಿಯಿಟ್ಟು ಹೊಡೆದು ತನ್ನ ನೆಲೆಗೆ ವಾಪಾಸ್ ಆಗಬಲ್ಲಂತಹ ಮಾನವರಹಿತ ವೈಮಾನಿಕ ವಾಹನಗಳನ್ನು ಹೊಂದಿಲ್ಲ. ಹೀಗಾಗಿ, ಭಾರತಕ್ಕೆ ಶಸ್ತ್ರಸಜ್ಜಿತ ದ್ರೋನ್ಗಳ ಮಾರಾಟವನ್ನು ಅನುಮತಿಸುವ ಯುಎಸ್ ನಿರ್ಧಾರವು ಭಾರತದ ಕ್ರಿಯಾಶೀಲತೆ ಮತ್ತು ಪರಾಕ್ರಮವನ್ನು ಗಣನೀಯವಾಗಿ ವೃದ್ಧಿಸಲಿದೆ.
ಅಲ್ಲದೇ, ಔರಾ ಎಂದು ಕರೆಯಲ್ಪಡುವ ತನ್ನದೇ ಆದ ಮಾನವರಹಿತ ವಾಯು ವಾಹನ (ಯುಸಿಎವಿ) ವೇದಿಕೆಯನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಭಾರತ ಮಗ್ನವಾಗಿದೆ. ಈ ವೇದಿಕೆಯು ಕ್ಷಿಪಣಿಗಳನ್ನು, ಬಾಂಬುಗಳನ್ನು ಮತ್ತು ನಿಖರ ಮಾರ್ಗದರ್ಶಿ ಶಸ್ತ್ರಾಸ್ತ್ರಗಳನ್ನು ಬಿಡುಗಡೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಯೋಜನೆಯು ಆರಂಭಿಕ ಹಂತಗಳಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.