ನವದೆಹಲಿ: ಹಿಂದೂಗಳ ಅತ್ಯಂತ ಪವಿತ್ರ ಯಾತ್ರೆ ಕೈಲಾಸ ಮಾನಸ ಸರೋವರ ಯಾತ್ರೆ ಇಂದಿನಿಂದ ಆರಂಭಗೊಂಡಿದೆ. ಯಾತ್ರಾರ್ಥಿಗಳ ಮೊದಲ ಬ್ಯಾಚ್ಗೆ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ನವದೆಹಲಿಯಲ್ಲಿ ಮಂಗಳವಾದ ಚಾಲನೆಯನ್ನು ನೀಡಿದರು.
ಈ ವೇಳೆ ಮಾತನಾಡಿದ ಅವರು, ” ಯಾತ್ರೆಯನ್ನು ಆಯೋಜನೆಗೊಳಿಸುವಲ್ಲಿ ಸಹಕಾರವನ್ನು ನೀಡಿದ ಚೀನಾ ಸರ್ಕಾರಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ, ಜನರಿಂದ ಜನರ ವಿನಿಮಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದು ಸರಿಯಾದ ಹೆಜ್ಜೆಯಾಗಿದೆ” ಎಂದಿದ್ದಾರೆ.
ಉತ್ತರಾಖಂಡದ ಲಿಪುಲೇಖ್ ಪಾಸ್ ಮತ್ತು ಸಿಕ್ಕಿಂನ ನಾಥು ಲಾ ಪಾಸ್-ಈ ಎರಡು ಮಾರ್ಗಗಳ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಳ್ಳಬಹುದಾಗಿದೆ. ದೆಹಲಿಯಲ್ಲಿ ನಡೆಸಲಾಗುವ ಸಿದ್ಧತಾ ಪ್ರಕ್ರಿಯೆಗೆ ತಗಲುವ 3 ದಿನ ಸೇರಿದಂತೆ ಒಂದೊಂದು ಬ್ಯಾಚ್ಗೂ ಯಾತ್ರೆ ಪೂರೈಸಲು ತಲಾ 24 ದಿನಗಳು ಬೇಕು.
ಲಿಪುಲೇಖ್ ಪಾಸ್ ಮೂಲಕ 18 ಬ್ಯಾಚ್ಗಳು ಯಾತ್ರೆ ಕೈಗೊಳ್ಳಲಿವೆ. ಒಂದೊಂದು ಬ್ಯಾಚ್ನಲ್ಲೂ ತಲಾ 60 ಮಂದಿ ಯಾತ್ರಿಕರು ಇರಲಿದ್ದಾರೆ. ನಾಥು ಲಾ ಪಾಸ್ ಮೂಲಕ ವಾಹನಗಳೂ ಚಲಿಸುತ್ತವೆ. ಹಿರಿಯ ನಾಗರಿಕರಿಗೆ ಹೇಳಿ ಮಾಡಿಸಿದ ಮಾರ್ಗ ಇದಾಗಿದೆ. ಇದರ ಮೂಲಕ ಈ ಬಾರಿ 10 ಬ್ಯಾಚ್ಗಳು ಪ್ರಯಾಣಿಸಲಿದ್ದು, ಒಂದೊಂದು ಬ್ಯಾಚಿನಲ್ಲಿ ತಲಾ 50 ಮಂದಿ ಇರಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.