ನವದೆಹಲಿ: ತೆಲಂಗಾಣದ ಕಲೇಶ್ವರಂ ಯೋಜನೆಯ ಭಾಗವಾಗಿ ಮೆಡಿಗಡ್ಡ ಅಣೆಕಟ್ಟು ಸಮೀಪದಲ್ಲಿರುವ 10 ಎಕರೆ ಅರಣ್ಯ ಭೂಮಿಗಾಗಿ ಕಟ್ಟೆ ಮತ್ತು ತಡೆಗೋಡೆಗಳನ್ನು ಕಟ್ಟಲು ಕೇಂದ್ರ ಸರ್ಕಾರ ಅನುಮೋದನೆಯನ್ನು ನೀಡಿದೆ.
“ಕಲೇಶ್ವರಂ ಯೋಜನೆಯ ಭಾಗವಾಗಿ ಮಹಾರಾಷ್ಟ್ರ ರಾಜ್ಯ ಗಡಿಗೆ ಹೊಂದಿಕೊಂಡಿರುವ ಮೆಡಿಗಡ್ಡ ಅಣೆಕಟ್ಟು ಸಮೀಪದ 10 ಎಕರೆ ಅರಣ್ಯ ಭೂಮಿಗೆ ಕಟ್ಟೆ ಮತ್ತು ತಡೆಗೋಡೆಗಳನ್ನು ಕಟ್ಟಲು ಕೇಂದದ್ರ ಪರಿಸರ, ಅರಣ್ಯ ಮತ್ತು ಹವಮಾನ ಬಲದಾವಣೆ ಸಚಿವಾಲಯ ಅನುಮೋದನೆಯನ್ನು ನೀಡಿದೆ” ಎಂದು ತೆಲಂಗಾಣ ಸರ್ಕಾರ ಪ್ರಕಟನೆಯಲ್ಲಿ ತಿಳಿಸಿದೆ.
ಒಂದು ತಿಂಗಳ ಹಿಂದೆಯೇ ಸಚಿವಾಲಯವು ಮೊದಲ ಹಂತದ ಕಾಮಗಾರಿಗೆ ಅನುಮೋದನೆಯನ್ನು ನೀಡಿತ್ತು. ರಾಜ್ಯ ಸರ್ಕಾರ ಈಗಾಗಲೇ 10 ಎಕರೆ ಭೂಮಿಯನ್ನು ಅರಣ್ಯಭೂಮಿಯಾಗಿ ಪರಿವರ್ತಿಸಲು ಭೂಸ್ವಾಧೀನ ಮಾಡಿಕೊಳ್ಳಲು ಅನುದಾನವನ್ನು ಸಂಗ್ರಹಿಸಿದೆ.
ನದಿ ನೀರಿ ಹರಿವನ್ನು ನಿಯಂತ್ರಿಸಿ, ಆ ಮೂಲಕ ಅರಣ್ಯ ಭೂಮಿಯನ್ನು ಸಂರಕ್ಷಿಸುವ ಉದ್ದೇಶದೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.