ಲಾಹೋರ್: ಕರ್ಜೀಸ್ಥಾನದ ಬಿಷ್ಕೆಕ್ನಲ್ಲಿ ಇದೇ ವಾರ ನಡೆಯಲಿರುವ ಶಾಂಘೈ ಕೊಅಪರೇಶನ್ ಆರ್ಗನೈಝೇಶನ್(SCO) ಸಮಿತ್ನಲ್ಲಿ ಭಾಗವಹಿಸಲು ತೆರಳುವ ಪ್ರಧಾನಿ ನರೇಂದ್ರ ಮೋದಿಯವರ ವಿಮಾನ ತನ್ನ ವಾಯು ಪ್ರದೇಶದ ಮೂಲಕ ಹಾದು ಹೋಗಲು ಪಾಕಿಸ್ಥಾನ ಸಮ್ಮತಿ ಸೂಚಿಸಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಕೂಡ ಈ ಸಮಿತ್ನಲ್ಲಿ ಭಾಗಿಯಾಗುತ್ತಿದ್ದಾರೆ.
ಜೂನ್ 13-14ರವರೆಗೆ ಬಿಷ್ಕೆಕ್ನಲ್ಲಿ ಸಮಿತ್ ಜರುಗಲಿದ್ದು, ಚೀನಾ ಅಧ್ಯಕ್ಷರು, ಮೋದಿ, ಇಮ್ರಾನ್ ಖಾನ್ ಸೇರಿದಂತೆ SCO ಸದಸ್ಯ ರಾಷ್ಟ್ರಗಳು ಇದರಲ್ಲಿ ಭಾಗಿಯಾಗುತ್ತಿವೆ.
ಫೆಬ್ರವರಿ 26ರಂದು ಬಾಲಾಕೋಟ್ ಮೇಲೆ ಭಾರತ ವೈಮಾನಿಕ ದಾಳಿಯನ್ನು ನಡೆಸಿದ ತರುವಾವ ಪಾಕಿಸ್ಥಾನ ತನ್ನ ವಾಯು ಪ್ರದೇಶವನ್ನು ಬಂದ್ ಮಾಡಿತ್ತು. ತನ್ನ 11 ವಾಯುಪ್ರದೇಶಗಳ ಪೈಕಿ ದಕ್ಷಿಣ ಪಾಕಿಸ್ಥಾನದಲ್ಲಿನ ಕೇವಲ ಎರಡು ವಾಯು ಪ್ರದೇಶಗಳನ್ನು ಮಾತ್ರ ಅದು ತೆರೆದಿದೆ.
ಪಾಕ್ ವಾಯು ಪ್ರದೇಶವನ್ನು ಬಳಸಿಕೊಂಡು ಬಿಷ್ಕೆಕ್ ತೆರಳಲು ಮೋದಿಯವರಿಗೆ ಅನುಮತಿಯನ್ನು ನೀಡಬೇಕು ಎಂದು ಪಾಕಿಸ್ಥಾನವನ್ನು ಭಾರತ ಕೋರಿತ್ತು, ಇದಕ್ಕೆ ಪಾಕಿಸ್ಥಾನ ಸರ್ಕಾರ ಸಮ್ಮತಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
SCO ಸಮಿತ್ನಲ್ಲಿ ಮೋದಿ ಮತ್ತು ಇಮ್ರಾನ್ ಖಾನ್ ಭಾಗಿಯಾಗುತ್ತಿದ್ದರೂ ಕೂಡ ಇಬ್ಬರ ನಡುವೆ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆಯುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಭಾರತದೊಂದಿಗೆ ಮಾತುಕತೆ ನಡೆಸಲು ಪಾಕಿಸ್ಥಾನ ಉತ್ಸುಹುಕವಾಗಿದ್ದರೂ ಕೂಡ, ಭಾರತ ಯಾವುದೇ ಆಸಕ್ತಿಯನ್ನು ತೋರಿಸುತ್ತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.