ನವದೆಹಲಿ: ರಾಜ್ಯ ಆಹಾರ ಭದ್ರತಾ ಸೂಚ್ಯಾಂಕ 2019ರಲ್ಲಿ ಮಹಾರಾಷ್ಟ್ರವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ಸಚಿವ ಹರ್ಷವರ್ಧನ್, “ಕಾಯಿಲೆಗಳು ಇಲ್ಲದಿರುವಿಕೆ ಮಾತ್ರ ಆರೋಗ್ಯವಲ್ಲ. ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸದೃಡತೆಗೆ ಆರೋಗ್ಯವಾಗಿದೆ” ಎಂದಿದ್ದಾರೆ.
“ಆಹಾರ ಎಂಬುದು ಎಲ್ಲರ ಜವಾಬ್ದಾರಿ. ಒಂದು ತುತ್ತು ಅನ್ನ ಕೂಡ ವ್ಯರ್ಥವಾಗದಂತೆ ನೋಡಿಕೊಳ್ಳುವ ಪ್ರತಿಜ್ಞೆಯನ್ನು ನಾವು ಮಾಡಬೇಕಿದೆ. ವೈಯಕ್ತಿಕವಾಗಿ ಮತ್ತು ಸಂಘಟನೆಯಾಗಿ ನಾವು ಆಹಾರ ಭದ್ರತೆಗೆ ಕೊಡುಗೆಯನ್ನು ನೀಡಬೇಕಿದೆ. ಇದರಿಂದ ಬಡತನ ಮತ್ತು ಅಪೌಷ್ಠಿಕತೆಯನ್ನು ಹೋಗಲಾಡಿಸಲು ಸಾಧ್ಯವಿದೆ” ಎಂದರು.
ಇದೇ ಮೊದಲ ಬಾರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಯೋಜನೆಗೊಳಿಸಿದ್ದು ಭಾಗಿಯಾಗಿ ಸಚಿವರು ಮಾತನಾಡಿದರು.
ಕಡಿಮೆ ತಿನ್ನಿ ಸರಿಯಾಗಿ ತಿನ್ನಿ ಅಭಿಯಾನವನ್ನು ಚಳುವಳಿಯನ್ನಾಗಿ ರೂಪಿಸುವಂತೆ ಕರೆ ನೀಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರ ನವ ಭಾರತದ ಕಲ್ಪನೆಯು ಆರೋಗ್ಯ ಸಾಮಾಜಿಕ ಭದ್ರತೆ ಮತ್ತು ಪೌಷ್ಟಿಕತೆಯನ್ನು ಒಳಗೊಂಡಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.