ಮುಂಬೈ: ಲೆಜೆಂಡರಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರು ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ. ಸೋಮವಾರ ಮುಂಬೈಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದಾರೆ.
ನಿವೃತ್ತಿಯನ್ನು ಘೋಷಿಸಿದ ಬಳಿಕ ಭಾವುಕರಾದ ಅವರು, “ಜನರು ನನ್ನ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ನಾನು ಎಂದೂ ಪರಿಗಣನೆಗೆ ತೆಗೆದುಕೊಂಡಿಲ್ಲ. ನನ್ನಲ್ಲಿ ನಾನು ನಂಬಿಕೆ ಇಟ್ಟೆ” ಎಂದಿದ್ದಾರೆ. ಅಲ್ಲದೆ ಸೌರವ್ ಗಂಗೂಲಿ ನಾಯಕತ್ವದಲ್ಲಿ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದ ತನ್ನ ಆರಂಭಿಕ ದಿನಗಳನ್ನು ಅವರು ಮೆಲುಕು ಹಾಕಿದರು. ಅಲ್ಲದೆ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ಸಂದರ್ಭಗಳನ್ನು ಅವರು ಜ್ಞಾಪಿಸಿಕೊಂಡರು.
ವಿಶ್ವಕಪ್ ವಿಜಯವನ್ನು ಸ್ಮರಿಸಿದ ಅವರು ಮಹೇಂದ್ರ ಸಿಂಗ್ ಧೋನಿಯವರ ನಾಯಕತ್ವಕ್ಕೆ ಕಾರಣವಾಗಿತ್ತು ಎಂದಿದ್ದಾರೆ.
ಯುವರಾಜ್ ಸಿಂಗ್ ಅವರು 2012 ರಲ್ಲಿ ಕೊನೆಯ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡಿದ್ದರು, 2017ರಲ್ಲಿ ಕೊನೆಯ ಬಾರಿಗೆ T-20 ಮತ್ತು ಏಕದಿನವನ್ನು ಆಡಿದ್ದರು.
ಒಟ್ಟು 304 ಏಕದಿನ ಆಡಿರುವ ಅವರು 8701 ರನ್ ಗಳಿಸಿದ್ದಾರೆ. 40 ಟೆಸ್ಟ್ ಪಂದ್ಯಗಳನ್ನು ಅವರು ಇದುವರೆಗೆ ಆಡಿದ್ದು 1900 ರನ್ ಗಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.