ರಾಯ್ಪುರ: ತೀವ್ರ ಸ್ವರೂಪದ ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ 13 ವರ್ಷದ ಬಾಲಕನನ್ನು 231 ಬೆಟಾಲಿಯನ್ನ ಸಿಆರ್ಪಿಎಫ್ ಯೋಧರು ತಮ್ಮ ಕ್ಯಾಂಪಿಗೆ ಕರೆದೊಯ್ದು ವೈದ್ಯಕೀಯ ಚಿಕಿತ್ಸೆ ನೀಡಿ ಬದುಕಿಸಿದ ಘಟನೆ ಛತ್ತೀಸ್ಗಢದ ಗುಮೋದಿ ಗ್ರಾಮದಲ್ಲಿ ನಡೆಸಿದೆ.
ಜೂನ್ 6 ರಂದು ಗಸ್ತು ತಿರುಗುತ್ತಿದ್ದ ಯೋಧರ ಕಣ್ಣಿಗೆ ಬಾಲಕ ತೀವ್ರ ಸ್ವರೂಪದಲ್ಲಿ ಅನಾರೋಗ್ಯಕ್ಕೀಡಾಗಿ ನರಳುತ್ತಿದ್ದುದು ಕಣ್ಣಿಗೆ ಬಿತ್ತು, ತಕ್ಷಣವೇ ಬಿದಿರಿನಿಂದ ಮಂಚದ ಮಾದರಿಯೊಂದನ್ನು ರಚಿಸಿ ಅದರಲ್ಲಿ ಬಾಲಕನನ್ನು ಕೂರಿಸಿಕೊಂಡು 8 ಕಿಮೀ ನಡೆದು ಸುಕ್ಮಾದ ಕೊಂಡಸವ್ಲಿಯಲ್ಲಿನ ತಮ್ಮ ಶಿಬಿರಕ್ಕೆ ಕರೆತಂದಿದ್ದಾರೆ, ಅಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಿದ್ದಾರೆ. ಬಾಲಕ ಈಗ ಸ್ವಸ್ಥನಾಗಿದ್ದಾನೆ ಎಂದು ಹೇಳಲಾಗಿದೆ.
ಯೋಧರ ಇಂತಹ ಮಾನವೀಯ ಕಾರ್ಯಗಳು ಆಗಾಗ ಸುದ್ದಿಯಾಗುತ್ತಿರುತ್ತದೆ. ಇತ್ತೀಚಿಗಷ್ಟೇ ಶ್ರೀನಗರದಲ್ಲಿ ಹಸಿದಿದ್ದ ದಿವ್ಯಾಂಗ ಮಗುವೊಂದಕ್ಕೆ ಕೈತುತ್ತು ತಿನ್ನಿಸಿದ ಯೋಧರೊಬ್ಬರ ವೀಡಿಯೋ ಭಾರೀ ವೈರಲ್ ಆಗಿತ್ತು.
ಬಾಲಕನನ್ನು ಸಿಆರ್ಪಿಎಫ್ ಯೋಧರು ತಮ್ಮ ಕ್ಯಾಂಪಿಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯವನ್ನು ANI ಸುದ್ದಿ ಸಂಸ್ಥೆ ಟ್ವಿಟರ್ ಮೂಲಕ ಹಂಚಿಕೊಂಡಿದೆ.
Chhattisgarh: While patrolling on June 6, troops of 231 battalion CRPF found a severely ill 13-year-old boy in Gumodi village.The troops carried the boy on a cot for 8 km & got him treated in their camp Kondasavli in Sukma.He was found to be suffering from jaundice; is stable now pic.twitter.com/MiFKBss5EY
— ANI (@ANI) June 7, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.