ಚೆನ್ನೈ: ಎಚ್ಸಿಎಲ್ ಮುಖ್ಯಸ್ಥ ಮತ್ತು ಟೆಕ್ ಉದ್ಯಮದಲ್ಲಿ ಕೋಟ್ಯಾಧೀಶ್ವರರಾಗಿರುವ ಶಿವ ನಾಡರ್ ಮಧುರೈನಲ್ಲಿನ ಕಾರ್ಪೋರೇಶನ್ ಶಾಲೆಯೊಂದಕ್ಕೆ 15 ಕೋಟಿಗಳನ್ನು ದಾನ ಮಾಡುವ ಮೂಲಕ ಮಾದರಿ ಎನಿಸಿಕೊಂಡಿದ್ದಾರೆ.
ನಾಡರ್ ಅವರಿಂದ ಹಣ ಪಡೆದುಕೊಂಡ ಬಳಿಕ ಎಲಂಗೋ ಕಾರ್ಪೋರೇಶನ್ ಸೆಕಂಡರಿ ಸ್ಕೂಲ್ನಲ್ಲಿ ಬೃಹತ್ ನವೀಕರಣ ಕಾರ್ಯಗಳು ನಡೆಯುತ್ತಿವೆ, ಮಾದರಿ ಹೈಸ್ಕೂಲ್ ಎನಿಸುವತ್ತ ಈ ಶಾಲೆ ಸಾಗುತ್ತಿದೆ. 2020ಕ್ಕೆ ನವೀಕರಣ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ನವೀಕರಣ ಕಾರ್ಯದ ಭಾಗವಾಗಿ ಹೊಸ ಕಟ್ಟಡಗಳನ್ನು, ಸ್ಮಾರ್ಟ್ಕ್ಲಾಸ್ಗಳನ್ನು, ಇನ್ನಿತರ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಹೊಸ ಆಡಳಿತ ಬ್ಲಾಕ್ ಮತ್ತು ಅಕಾಡಮಿಕ್ ಬ್ಲಾಕ್ ಕೂಡ ನಿರ್ಮಾಣವಾಗಲಿದೆ. ಹೊಸ ಪಿಠೋಪಕರಣಗಳನ್ನೂ ಜೋಡಿಸಲಾಗುತ್ತದೆ.
2011ರಲ್ಲಿ ಇಲ್ಲಿಗೆ ಆಗಮಿಸಿದ್ದ ವೇಳೆ ಶಿವ ನಡಾರ್ ಅವರು ಶಾಲೆಯನ್ನು ನವೀಕರಣಗೊಳಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅದರಂತೆ ಮಧುರೈ ಕಾರ್ಪೋರೇಶನ್ ಸಹಾಯವನ್ನು ಪಡೆದುಕೊಂಡು ನವೀಕರಣ ಕಾರ್ಯವನ್ನು ಆರಂಭಿಸಲಾಗಿದೆ. ಅಷ್ಟು ಮಾತ್ರವಲ್ಲದೇ ಎಚ್ಸಿಎಲ್ ಸಾಮಾಜಿಕ ಜವಾಬ್ದಾರಿ ವಿಭಾಗವು, ಮಧುರೈನಲ್ಲಿನ ಸುಮಾರು 10 ಕಾರ್ಪೋರೇಶನ್ ಸ್ಕೂಲ್ಗಳನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಿದೆ. ಇದರಿಂದ ಸುಮಾರು 6 ಸಾವಿರ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.