ನವದೆಹಲಿ: ಭಾರತೀಯ ರೈಲ್ವೇಯು ತನ್ನ ಸಾಮರ್ಥ್ಯವನ್ನು ಇನ್ನಷ್ಟು ಉದ್ದೀಪನಗೊಳಿಸುವ ಸಲುವಾಗಿ, 25 ಇಂಧನ ದಕ್ಷ, ಪುನಃರಚಿಸಲಾದ ಎಲೆಕ್ಟ್ರಿಕಲ್ ಲೊಕೊಮೋಟಿವ್ಗಳನ್ನು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)ನಿಂದ ಖರೀದಿಸಲು ಮುಂದಾಗಿದೆ. ಪರಿಸರ ದಿನ ಆಚರಿಸುವುದಕ್ಕೆ ಒಂದು ದಿನ ಮುಂಚಿತವಾಗಿಯೇ ಈ ನಿರ್ಧಾರವನ್ನು ರೈಲ್ವೇ ತೆಗೆದುಕೊಂಡಿದ್ದು ಮಹತ್ವದ್ದಾಗಿದೆ. ಈ ಲೊಕೊಮೋಟಿವ್ BHEL ನಿಂದ ಸಾಧಿಸಲ್ಪಟ್ಟ ಒಂದು ಪ್ರಮುಖ ತಾಂತ್ರಿಕ ಸಾಧನೆಯಾಗಿದ್ದು, ಇದರಲ್ಲಿ ಬ್ರೇಕ್ ಮೋಡ್ನಲ್ಲಿರುವಾಗ ರೈಲಿನ ಚಲನಾ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಮರು ಪರಿವರ್ತಿಸಲಾಗುತ್ತದೆ.
ಇದನ್ನು ನಂತರ ರೈಲ್ವೆಯ ವಿದ್ಯುತ್ ಗ್ರಿಡ್ ವಾಪಾಸ್ ತರಲಾಗುತ್ತದೆ. ಈ ಹಿಂದೆ ಶಕ್ತಿಯು ಶಾಖದ ರೂಪದಲ್ಲಿ ಲೋಕೋಮೋಟಿವ್ಗಳಲ್ಲಿ ವ್ಯರ್ಥವಾಗುತ್ತಿತ್ತು. ಬಿಎಚ್ಇಎಲ್ ಭಾರತೀಯ ರೈಲ್ವೆಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾ ಬಂದಿದೆ ಮತ್ತು ಕಳೆದ ವರ್ಷ 20 ಎಲೆಕ್ಟ್ರಿಕಲ್ ಲೊಕೊಮೋಟಿವ್ಗಳನ್ನು ಪೂರೈಕೆ ಮಾಡಿದೆ ಮತ್ತು ಈ ವರ್ಷ ಇನ್ನೂ 10 ಲೋಕೋಮೋಟಿವ್ಗಳನ್ನು ಪೂರೈಕೆ ಮಾಡುತ್ತಿದೆ. ವರ್ಷಕ್ಕೆ 100 ಇಂಜಿನ್ಗಳನ್ನು ತಯಾರಿಸಲು ಮತ್ತು ಸರಬರಾಜು ಮಾಡುವ ಮಟ್ಟಕ್ಕೆ ಕಂಪನಿಯು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ.
ಅಲ್ಲದೆ, ಪರಿಸರ ಸಂರಕ್ಷಣೆಯನ್ನು ದೊಡ್ಡ ಮಟ್ಟದಲ್ಲಿ ಮಾಡಲು ರೈಲ್ವೆ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಹಿಂದಿನ ಸರ್ಕಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯ ನೇತೃತ್ವದಲ್ಲಿ, ಸ್ವಚ್ಛತೆಗೆ ಹೆಚ್ಚಿನ ಉತ್ತೇಜನವನ್ನು ನೀಡಲಾಗಿತ್ತು. ಸ್ವಚ್ಚ ಭಾರತ ಅಭಿಯಾನದ ಫಲಿತಾಂಶಗಳು ಕೂಡ ಸಕಾರಾತ್ಮಕವಾಗಿದೆ. ರೈಲಿನಲ್ಲಿ ಬಯೋ ಟಾಯ್ಲೆಟ್ಗಳನ್ನು ಅಳವಡಿಸುವ ಮೂಲಕ ರೈಲ್ವೆಗಳು ಮಹತ್ವದ ಪರಿವರ್ತನೆಯನ್ನು ಕಾಣುತ್ತಿವೆ.
ಅಲ್ಲದೆ, ರೈಲ್ವೆ ಸ್ವಚ್ಛತೆ ಉತ್ತೇಜಿಸುವಲ್ಲಿನ ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತಲೇ ಇದೆ. ಹಸಿರು ಪರಿಸರ ಮತ್ತು ನವೀಕರಿಸಬಹುದಾದ ಇಂಧನವನ್ನು ಉತ್ತೇಜಿಸುತ್ತಿದೆ, ಸೋಲಾರ್ ಪ್ಯಾನಲ್ಗಳನ್ನು ಸ್ಥಾಪಿಸುವ ಕ್ರಮಗಳನ್ನು ತ್ವರಿತಗೊಳಿಸಿದೆ. ಇದೀಗ ಪುನಃ ರಚಿಸಲಾದ ಎಲೆಕ್ಟ್ರಿಕಲ್ ಲೊಕೊಮೊಟಿವ್ ಖರೀದಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.