ನವದೆಹಲಿ: ನಾಪತ್ತೆಯಾಗಿರುವ AN-32 ಏರ್ಕ್ರಾಫ್ಟ್ ಅನ್ನು ಪತ್ತೆ ಮಾಡುವ ಸಲುವಾಗಿ ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ವಾಯುಸೇನೆ ಗ್ಲೋಬಲ್ 5000 ಸರ್ವಿಲೆನ್ಸ್ ಏರ್ಕ್ರಾಫ್ಟ್ ಮತ್ತು NTRO ಸ್ಪೈ ಸ್ಯಾಟಲೈಟ್ ಸೇರಿದಂತೆ ಇತರ ಹಲವಾರು ಅಸ್ತ್ರಗಳನ್ನು ಬಳಸಿಕೊಂಡು ನಾಪತ್ತೆಯಾದ ವಿಮಾನವನ್ನು ಪತ್ತೆ ಮಾಡುತ್ತಿದೆ.
ಪ್ರಸ್ತುತ ನಡೆಯುತ್ತಿರುವ ಶೋಧ ಕಾರ್ಯಾಚರಣೆ ಮತ್ತು ರಕ್ಷಣಾ ಕಾರ್ಯಾಚರಣೆಗಳ ನಿರಂತರ ಮಾಹಿತಿಯನ್ನು ಪಡೆದುಕೊಳ್ಳುತ್ತಿರುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಸಾಧ್ಯವಿರುವ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ವಿಮಾನ ಪತ್ತೆ ಕಾರ್ಯ ನಡೆಸುವಂತೆ ಅವರು ಆದೇಶಿಸಿದ್ದಾರೆ. ವಿಮಾನವು ಅರುಣಾಚಲಪ್ರದೇಶದಿಂದ ಜೂನ್ 3ರಂದು ನಾಪತ್ತೆಯಾಗಿದೆ.
ಗ್ಲೋಬಲ್ 5000 ಸರ್ವಿಲೆನ್ಸ್ ಏರ್ಕ್ರಾಫ್ಟ್ ಆವಿಯೇಶನ್ ರಿಸರ್ಚ್ ಸೆಂಟರ್ನ ಜೆಟ್ ಆಗಿದ್ದು, ಸ್ಪೆಷಲಿಸ್ಟ್ ಸೆನ್ಸಾರ್ ಇರುವ ಇದು ಭೂಮಿಯಲ್ಲಿನ ಇಮೇಜ್ ಅನ್ನು ಅತ್ಯಂತ ಪರಿಣಾಮಕಾರಿಯಾಗಿ ತೆಗೆಯಬಲ್ಲದು ಎಂದು ಮೂಲಗಳು ತಿಳಿಸಿವೆ.
ಇನ್ನೊಂದೆಡೆ ಭೂಸೇನೆ ಮಾನವರಹಿತ ಏರಿಯಲ್ ವೆಹ್ಹಿಕಲ್ ಅನ್ನು ಶೋಧ ಕಾರ್ಯಕ್ಕಾಗಿ ನಿಯೋಜನೆಗೊಳಿಸಿದೆ. ವಾಯುಸೇನೆ ಚೀತಾ ಹೆಲಿಕಾಫ್ಟರ್ ಗಳನ್ನೂ ಪತ್ತೆ ಕಾರ್ಯಕ್ಕಾಗಿ ನಿಯೋಜನೆಗೊಳಿಸಿದೆ.
ಶುಕ್ರವಾರಕ್ಕೆ ವಿಮಾನದ ಪತ್ತೆ ಕಾರ್ಯ ಇಂದಿಗೆ 5ನೇ ದಿನಕ್ಕೆ ಕಾಲಿಟ್ಟಿದೆ. ಕೆಟ್ಟ ಹವಾಗುಣವು ಶೋಧ ಕಾರ್ಯಕ್ಕೆ ಪದೇ ಪದೇ ಅಡ್ಡಿಯಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.