ನವದೆಹಲಿ: ಇಸ್ರೋ ವಿಶ್ವದ ಅಗ್ರಗಣ್ಯ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಒಂದು. ಆದರೆ ಇಸ್ರೋ ಕೇವಲ ಬಾಹ್ಯಾಕಾಶ ಯೋಜನೆ ಮತ್ತು ದಾಖಲೆಗಳಿಗಾಗಿ ಪ್ರಸಿದ್ಧಿ ಪಡೆದಿಲ್ಲ, ಅದು ಹಲವಾರು ನಾವೀನ್ಯ ಕಾರ್ಯಕ್ರಮಗಳಿಗಾಗಿಯೂ ಖ್ಯಾತಿ ಪಡೆದುಕೊಂಡಿದೆ.
ಈ ಇಸ್ರೋ ‘ಬ್ಯುಸಿನೆಸ್ ಸ್ಪೇಸ್’ನಲ್ಲೂ ಕಾರ್ಯನಿರತವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ದೇಶದೊಳಗೆ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುವ ಸ್ಟಾರ್ಟ್ಅಪ್ ಮತ್ತು ಉದ್ಯಮಶೀಲತ್ವವನ್ನು ಉತ್ತೇಜಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಿದೆ. ಪ್ರತಿ ಭಾರತೀಯರ ಕನಸನ್ನು ಸಾಕಾರಗೊಳಿಸುವ ಸಲುವಾಗಿ ಭಾರತದ ವಿದ್ಯಾರ್ಥಿ ಮತ್ತು ಸ್ಟಾರ್ಟ್ಅಪ್ ಸಮುದಾಯವನ್ನು ಉತ್ತೇಜಿಸುವ ಹಲವಾರು ಕ್ರಮಗಳನ್ನೂ ತೆಗೆದುಕೊಂಡಿದೆ.
ದೇಶದ ಹಲವಾರು ಪ್ರತಿಷ್ಠಿತ ಶಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿ ಬಾಹ್ಯಾಕಾಶ ಮತ್ತು ತಂತ್ರಜ್ಞಾನ ವಲಯದಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡುತ್ತಿದೆ.
ಇತ್ತೀಚಿಗಷ್ಟೇ ಇಸ್ರೋ, NIT (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಯಲ್ಲಿ 3ನೇ ಸ್ಪೇಸ್ ಟೆಕ್ನಾಲಜಿ ಇನ್ಕ್ಯುಬೇಷನ್ ಸೆಂಟರ್ ಅನ್ನು ಸ್ಥಾಪನೆ ಮಾಡುವುದಾಗಿ ಅದು ಘೋಷಿಸಿದೆ. ವಿದ್ಯಾರ್ಥಿ ಸಮುದಾಯದೊಳಗಿನ ಉದ್ಯಮಶೀಲತ್ವವನ್ನು ಮತ್ತು ಸ್ಟಾರ್ಟ್ಅಪ್ ಅನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
ಮಾತ್ರವಲ್ಲದೇ, ಭಾರತದಲ್ಲಿನ ಬಾಹ್ಯಾಕಾಶ ತಂತ್ರಜ್ಞಾನದ ವೃದ್ಧಿಗೆ ಅಕಾಡೆಮಿಯಾ-ಇಂಡಸ್ಟ್ರೀ ಎಕೋಸಿಸ್ಟಮ್ ಅನ್ನೂ ಅಭಿವೃದ್ಧಿಪಡಿಸಲು ಇಸ್ರೋ ಮುಂದಾಗಿದೆ.
ಈಗಾಗಲೇ ಅಗರ್ತಾಲ ಮತ್ತು ಜಲಂಧರ್ಗಳ ನ್ಯಾಷನಲ್ ಇನ್ಸ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎರಡು ಇನ್ಕ್ಯುಬೇಷನ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.