ಕಾರ್ಕಳ : ತಾಲೂಕಿನಲ್ಲಿ ಅಂತರ್ಜಲ ವೃದ್ದಿಯೊಂದಿಗೆ ನೀರಿನ ಸಮಸ್ಯೆಯನ್ನು ನೀಗಿಸುವ ಪ್ರಯತ್ನವನ್ನು ನಡೆಸುವುದಾಗಿ ಶಾಸಕ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ಮಲೆನಾಡಿನ ತಪ್ಪಲಿನಲ್ಲಿರುವ ಕಾರ್ಕಳ ತಾಲೂಕಿನಲ್ಲಿ ಪ್ರಮುಖ ನದಿಗಳಾದ ಸೀತಾನದಿ, ಎಣ್ಣೆಹೊಳೆ, ಸುವರ್ಣ ಸೇರಿದಂತೆ ಹಲವಾರು ದೊಡ್ಡ ಹಾಗೂ ಚಿಕ್ಕಪುಟ್ಟ ನದಿಗಳು ಹರಿಯುತ್ತವೆ. ಆದರೂ ಬೇಸಿಗೆ ಕಾಲದಲ್ಲಿ ತಾಲೂಕಿನಾದ್ಯಂತ ಕುಡಿಯುವ ನೀರಿಗೆ ಜನರು ಪರದಾಡುವ ಸ್ಥಿತಿ ಇದೆ. ಹಾಗೆಯೇ ಕೃಷಿಕರು ಕೂಡಾ ಕೃಷಿ ಚಟುವಟಿಕೆಗಳಿಗೆ ನೀರಿನ ತಾತ್ವರ ಎದುರಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಇಷ್ಟು ನದಿಗಳಿದ್ದರೂ ತಾಲೂಕಿನ ನೀರಿನ ಜ್ವಲಂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅನುಪಯುಕ್ತವಾಗಿ ಹರಿದು ಹೋಗುವ ನೀರನ್ನು ಕಿಂಡಿ ಅಣೆಕಟ್ಟುಗಳಲ್ಲಿ ಶೇಖರಿಸಿ ಅಂತರ್ಜಲದ ಮಟ್ಟವನ್ನು ಏರಿಸಿ ಈ ಮೂಲಕ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹಾರ ಕಂಡುಕೊಳ್ಳುವುದರೊಂದಿಗೆ ಆ ನೀರನ್ನು ಕೃಷಿ ಚಟುವಟಿಕೆಗಳಿಗೆ ಉಪಯೋಗಿಸುವ ಉದ್ದೇಶದಿಂದ ತಾಲೂಕಿನ ಎಲ್ಲಾ ನದಿಗಳಿಗೆ 26 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವಂತೆ ರೂ ೩೫ ಕೋಟಿ ಮೊತ್ತದ ಯೋಜನೆಯನ್ನು ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆಗೆ ಅತೀ ಶೀಘ್ರದಲ್ಲಿ ಮಂಜೂರಾತಿ ದೊರೆಯಲಿದ್ದು, ಕಾರ್ಕಳದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಒಂದೇ ಬಾರಿ 26 ಕಿಂಡಿ ಅಣೆಕಟ್ಟುಗಳ ನಿರ್ಮಾಣ ಕಾರ್ಯ ನಡೆಯಲಿದೆ ಎಂದಿದ್ದಾರೆ.
ಕುಕ್ಕುಜೆ ಗ್ರಾಮದ ಕೆಳಮನೆ ಓಡದಕಡಿ ಬಳಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ, ಶಿವಪುರ ಗ್ರಾಮದ ಸೂರಿಮಣ್ಣು ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ, ಕುಚ್ಚೂರು ಗ್ರಾಮದ ಕೆಳಗಾದ್ಲು ಎಂಬಲ್ಲಿ ಸೀತಾ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣ, ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಎಂಬಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ, ಸಾಣೂರು ಗ್ರಾಮದ ಗುತ್ತು ಬಳಿ ಕಿಂಡಿ ಅಣೆಕಟ್ಟು ನಿರ್ಮಾಣ, ಸೀತಾನದಿ ಎಂಬಲ್ಲಿ ಸೀತಾ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಾಣ, ಕೆರ್ವಾಶೆ ಗ್ರಾಮದ ಹುರಿಕುಮೇರು ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ, ನಿಟ್ಟೆ ಗ್ರಾಮದ ಶೆಟ್ಟಿಬೆಟ್ಟು ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ, ಬೋಳ ಗ್ರಾಮದ ಕಲ್ಬೆಟ್ಟು ಜಗನ್ನಾಥ ಶೆಟ್ಟಿ ಮನೆ ಬಳಿ ಕಿಂಡಿ ಅಣೆಕಟ್ಟು ನಿರ್ಮಾಣ, ಕಬ್ಬಿನಾಲೆ ಗ್ರಾಮದ ಮುದೇಲ್ಕಡಿ ಎಂಬಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ, ಈದು ಗ್ರಾಮದ ಪಾಲಡ್ಕ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ, ನಲ್ಲೂರು ಮತ್ತು ಮಿಯಾರು ಗ್ರಾಮಗಳ ಗಡಿ ಭಾಗದ ಮಿಯಾರು ಸೇತುವೆ ಎದುರುಗಡೆ ಕಿಂಡಿ ಅಣೆಕಟ್ಟು ನಿರ್ಮಾಣ, ಇರ್ವತ್ತೂರು ಗ್ರಾಮದ ಗೋಲ್ದಿಂಡಿ ಎಂಬಲ್ಲಿ ಕಡಂಬರ ಮನೆ ಬಳಿ ಕಿಂಡಿ ಅಣೆಕಟ್ಟು ನಿರ್ಮಾಣ, ಕೌಡೂರು ಗ್ರಾಮದ ಬಲಿಯಾಳ ಕೆಳಮನೆ ಮಬುರಟ್ಟ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ, ಕುಕ್ಕುಂದೂರು ಗ್ರಾಮದ ನಕ್ರೆ ದೇವರಕಟ್ಟೆ ಎಂಬಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ, ಬೋಳ ಗ್ರಾಮದ ಗರ್ದಬೆಟ್ಟು ಹತ್ತಿರ ಕಿಂಡಿ ಅಣೆಕಟ್ಟು ನಿರ್ಮಾಣ, ಅಂಡಾರು ಗ್ರಾಮದ ಕರಿಯಾಲು ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ, ಇನ್ನಾ ಗ್ರಾಮದ ಕೊರಂಗಿಲಾಯ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ, ಮರ್ಣೆ ಕಾಡುಹೊಳೆ ಗ್ರಾಮಗಳ ಮಧ್ಯೆ ಭಾಗ್ಯೋದಯ ರ್ರೈಸ್ಮಿಲ್ ಬಳಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ, ಶಿವಪುರ ಗ್ರಾಮದ ಕಾಚಿಲ ಮಲೆಬೆಟ್ಟು ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ, ಹೆಬ್ರಿ ಗ್ರಾಮದ ದೇಖಿಬೆಟ್ಟು ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ, ವರಂಗ ಗ್ರಾಮದ ಮೂಡುಕುಡೂರು ಗೋಪಾಲ ಕುಲಾಲ್ ಮನೆ ಬಳಿ ಕಿಂಡಿ ಅಣೆಕಟ್ಟು ನಿರ್ಮಾಣ, ವರಂಗ ಗ್ರಾಮದ ಜಲಜ ಪೂಜಾರಿ ಮನೆ ಬಳಿ ಕಿಂಡಿ ಅಣೆಕಟ್ಟು ನಿರ್ಮಾಣ, ಬೈಲೂರು ಗ್ರಾಮದ ನಂದರಬೆಟ್ಟು ಅಣ್ಣು ಪೂಜಾರಿ ಮನೆ ಬಳಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ, ಕುಕ್ಕುಂದೂರು ಗ್ರಾಮದ ಬೇಲೊಟ್ಟು ಗುತ್ತು ಬಳಿ ಕಿಂಡಿ ಅಣೆಕಟ್ಟು ನಿರ್ಮಾಣ, ಕಲ್ಯಾ ಗ್ರಾಮದ ಕುಂಟಾಡಿ ಬಲ್ಮೆ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.