ನವದೆಹಲಿ : ಕೇಂದ್ರದ 8 ಸಂಪುಟ ಸಮಿತಿಗಳು ಮರುರಚನೆಗೊಂಡಿವೆ. 6 ಸಂಪುಟ ಸಮಿತಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಲ್ಲಾ 8 ಸಂಪುಟ ಸಮಿತಿಗಳಲ್ಲಿ ಗೃಹ ಸಚಿವ ಅಮಿತ್ ಷಾ, 2 ಸಂಪುಟ ಸಮಿತಿಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದ್ದಾರೆ.
ಕೇಂದ್ರದ ಸಂಪುಟ ನೇಮಕಾತಿ ಕುರಿತ ಸಂಪುಟ ಸಮಿತಿ, ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ, ಭದ್ರತಾ ಸಂಪುಟ ಸಮಿತಿ, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ, ವಸತಿಯ ಸಂಪುಟ ಸಮಿತಿ, ಹೂಡಿಕೆ ಮತ್ತು ಅಭಿವೃದ್ಧಿ ಕುರಿತ ಸಂಪುಟ, ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ, ಮತ್ತು ಉದ್ಯೋಗ ಮತ್ತು ಕೌಶಲ ಸಂಪುಟ ಸಮಿತಿ ಒಟ್ಟು 8 ಸಂಪುಟ ಸಮಿತಿಗಳನ್ನು ಕೇಂದ್ರ ಸರ್ಕಾರ ಮರುರಚನೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಅಮಿತ್ ಷಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ, ಡಾ. ಎಸ್. ಜೈಶಂಕರ್, ಪಿಯೂಶ್ ಗೋಯೆಲ್, ರವಿಶಂಕರ್ ಪ್ರಸಾದ್, ಸದಾನಂದ ಗೌಡ, ನರೇಂದ್ರ ಸಿಂಗ್ ತೋಮರ್, ಹರ್ಸಿಮ್ರತ್ ಕೌರ್ ಬಾದಲ್, ಧರ್ಮೇಂದರ್ ಪ್ರಧಾನ್ ಈ ಸಮಿತಿಯಲ್ಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತಾ ಸಂಪುಟ ಸಮಿತಿ, ಕೇಂದ್ರದ ಸಂಪುಟ ನೇಮಕಾತಿ ಕುರಿತ ಸಂಪುಟ ಸಮಿತಿ, ಭದ್ರತಾ ಸಂಪುಟ ಸಮಿತಿ, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ, ಹೂಡಿಕೆ ಮತ್ತು ಅಭಿವೃದ್ಧಿ ಕುರಿತ ಸಂಪುಟ, ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ, ಮತ್ತು ಉದ್ಯೋಗ ಮತ್ತು ಕೌಶಲ ಸಂಪುಟ ಸಮಿತಿ ಸೇರಿ ಒಟ್ಟು 6 ಸಂಪುಟ ಸಮಿತಿಗಳಲ್ಲಿದ್ದಾರೆ.
ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಅವರು ಭದ್ರತಾ ಸಂಪುಟ ಸಮಿತಿ ಹಾಗೂ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಗಳಲ್ಲಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ, ವಸತಿಯ ಸಂಪುಟ ಸಮಿತಿ, ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ, ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ, ಭದ್ರತಾ ಸಂಪುಟ ಸಮಿತಿ, ಹೂಡಿಕೆ ಮತ್ತು ಅಭಿವೃದ್ಧಿ ಕುರಿತ ಸಂಪುಟ, ಮತ್ತು ಉದ್ಯೋಗ ಮತ್ತು ಕೌಶಲ ಸಂಪುಟ ಸಮಿತಿ ಸೇರಿ ಒಟ್ಟು 6 ಸಂಪುಟ ಸಮಿತಿಗಳಲ್ಲಿದ್ದಾರೆ.
ಭದ್ರತಾ ಸಂಪುಟ ಸಮಿತಿಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ಜೈಶಂಕರ್ ಇದ್ದಾರೆ.
ವಸತಿ ಸಂಪುಟ ಸಮಿತಿಯಲ್ಲಿ ಗೃಹಸಚಿವ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ, ಪಿಯೂಶ್ ಗೋಯಲ್ ಇದ್ದಾರೆ.
ಸಂಪುಟ ನೇಮಕಾತಿ ಕುರಿತ ಸಂಪುಟ ಸಮಿತಿಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಇದ್ದಾರೆ. ಜಿತೇಂದ್ರ ಸಿಂಗ್, ಹರ್ದೀಪ್ ಸಿಂಗ್ ವಿಶೇಷ ಆಹ್ವಾನಿತರು.
ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವ್ಡೇಕರ್, ರಾಮ್ವಿಲಾಸ್ ಪಾಸ್ವಾನ್, ನರೇಂದ್ರ ಸಿಂಗ್ ತೋಮರ್, ತಾವರ್ಚಂದ್ ಗೆಹ್ಲೋಟ್, ಪ್ರಲ್ಹಾದ್ ಜೋಶಿ ಇದ್ದಾರೆ. ಅರ್ಜುನ್ ರಾಮ್ ಮೇಘಾವಾಲ್ ಮತ್ತು ವಿ. ಮುರಳೀಧರನ್ ವಿಶೇಷ ಆಹ್ವಾನಿತರು.
ಉದ್ಯೋಗ ಮತ್ತು ಕೌಶಲ ಸಂಪುಟ ಸಮಿತಿಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ, ಪಿಯೂಶ್ ಗೋಯಲ್, ನರೇಂದ್ರ ಸಿಂಗ್ ತೋಮರ್, ಧರ್ಮೇಂದ್ರ ಪ್ರಧಾನ್, ಸಂತೋಷ್ ಕುಮಾರ್ ಗಾಂಗ್ವಾರ್ , ಡಾ. ಮಹೇಂದ್ರನಾಥ್ ಪಾಂಡೆ, ಹರ್ದೀಪ್ ಸಿಂಗ್ ಪುರಿ ಇದ್ದಾರೆ. ಸ್ಮೃತಿ ಇರಾನಿ ಮತ್ತು ಪ್ರಹ್ಲಾದ್ ಸಿಂಗ್ ಪಟೇಲ್ ವಿಶೇಷ ಆಹ್ವಾನಿತರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.