ನವದೆಹಲಿ: ಮೂಲಸೌಕರ್ಯಗಳ ಅಭಿವೃದ್ಧಿಗೆ ಉತ್ತರಪ್ರದೇಶದ ಸರ್ಕಾರ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಎಲ್ಲದಕ್ಕೂ ಮಿಗಿಲಾಗಿ ತನ್ನ ರಾಜ್ಯದ ಪ್ರತಿ ಭಾಗವನ್ನು 2022ರ ವೇಳೆಗೆ ಪರಸ್ಪರ ಸಂಪರ್ಕಿತಗೊಳಿಸುವುದಕ್ಕೆ ಅದು ಯೋಜನೆ ರೂಪಿಸಿದೆ. ಪ್ರತಿ ಭಾಗದಲ್ಲೂ ಎಕ್ಸ್ಪ್ರೆಸ್ ವೇ ನಿರ್ಮಾಣ ಮಾಡುವುದು ಅದರ ಗುರಿಯಾಗಿದೆ.
ಯೋಗಿ ಸರ್ಕಾರವು ಲಕ್ನೋವನ್ನು ಘಾಜಿಯಾಪುರದೊಂದಿಗೆ ಅಮೇಥಿ, ಅಂಬೇಡ್ಕರ್ ನಗರ್, ಸುಲ್ತಾನಪುರ್, ಫೈಝಾಬಾದ್, ಆಜಂಘರ್ ಮತ್ತು ಮುವ್ ಮೂಲಕ ಸಂಪರ್ಕಿಸುವ 341 ಕಿಮೀ ಉದ್ದ ಪೂರ್ವಾಂಚಲ ಎಕ್ಸ್ಪ್ರೆಸ್ ವೇ ನೊಂದಿಗೆ ನಾಲ್ಕು ಬೃಹತ್ ಹೆದ್ದಾರಿ ಯೋಜನೆಗಳನ್ನು ಹಾಕಿಕೊಂಡಿದೆ. ಈಗಾಗಲೇ ಯೋಜನೆಗೆ ಶೇ. 96 ರಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ, ಜೂನ್ 15ರೊಳಗೆ ಉಳಿದ ಸ್ವಾಧೀನ ಪ್ರಕ್ರಿಯೆ ಮುಕ್ತಾಯವಾಗಲಿದೆ. ಈ ಮಾರ್ಗಗಳನ್ನು 2020ರ ವೇಳೆಗೆ ಸಾರ್ವಜನಿಕರಿಗೆ ಮುಕ್ತಗೊಳಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ.
ಈ ಮಹತ್ವಾಕಾಂಕ್ಷೆಯ ಹೆದ್ದಾರಿ ಯೋಜನೆಯು ಮಧ್ಯ ಉತ್ತರಪ್ರದೇಶವನ್ನು ಪೂರ್ವ ಉತ್ತರಪ್ರದೇಶದೊಂದಿಗೆ ಸಂಪರ್ಕಿತಗೊಳಿಸಲಿದೆ. ಪಶ್ಚಿಮ ಯುಪಿಯು ಈಗಾಗಲೇ 302ಕಿಮೀ ಆಗ್ರಾ ಲಕ್ನೋ ಎಕ್ಸ್ಪ್ರೆಸ್ ವೇ ಮೂಲಕ ಕನೆಕ್ಟ್ ಆಗಿದೆ. ಆಗ್ರಾ ಮತ್ತು ದೆಹಲಿಗಳನ್ನು 205 ಕಿಮೀ ಉದ್ದದ ಯಮುನಾ ಎಕ್ಸ್ಪ್ರೆಸ್ ವೇ ಮೂಲಕ ಕನೆಕ್ಟ್ ಮಾಡಲಾಗಿದೆ. ಹೀಗಾಗಿ ಪೂರ್ವಾಂಚಲ ಎಕ್ಸ್ಪ್ರೆಸ್ ವೇ ದೆಹಲಿ ಮತ್ತು ಯುಪಿ ಪೂರ್ವ ಗಡಿ ಭಾಗಗಳನ್ನು ಕನೆಕ್ಟ್ ಮಾಡಲಿದೆ.
ಈ ಯೋಜನೆ ಪೂರ್ಣಗೊಂಡ ಬಳಿಕ ಉತ್ತರಪ್ರದೇಶದ ಪ್ರತಿಭಾಗವೂ ಪರಸ್ಪರ 10 ಗಂಟೆಗಳ ಪ್ರಯಾಣದಲ್ಲಿ ಕನೆಕ್ಟ್ ಆಗಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.