ನವದೆಹಲಿ: ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಮನುಕುಲದ ಉಳಿವಿಗೆ, ಆರೋಗ್ಯಕ್ಕೆ ಪ್ರಕೃತಿ ಬೇಕೇ ಬೇಕೇ. ಇಂತಹ ಪ್ರಕೃತಿಯನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪರಿಸರ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಪರಿಸರ ದಿನದ ಅಂಗವಾಗಿ ಕೇಂದ್ರ ಪರಿಸರ ಸಚಿವಾಲಯವು ವಿಶೇಷ ಸೆಲ್ಫಿ ಅಭಿಯಾನವನ್ನು ಆರಂಭಿಸಿದೆ.
ಗಿಡವನ್ನು ನೆಟ್ಟು, ಅದರ ಜೊತೆಗಿನ ಸೆಲ್ಫಿಯನ್ನು ನಮಗೆ ಕಳುಹಿಸಿ ಕೊಡಿ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ದೇಶದ ಜನರಿಗೆ ಕರೆಯನ್ನು ನೀಡಿದ್ದಾರೆ.
ಟ್ವಿಟ್ ಮಾಡಿರುವ ಅವರು, “ವಿಶ್ವ ಪರಿಸರದ ದಿನದ ಸಂದರ್ಭದಲ್ಲಿ #selfiewithsapling ಅಭಿಯಾನವನ್ನು ಆರಂಭಿಸಲು ಸಂತೋಷವಾಗುತ್ತಿದೆ. ಗಿಡ ನೆಟ್ಟು, ಅದರೊಂದಿಗಿನ ಸೆಲ್ಫಿಯನ್ನು #selfiewithsapling ಹ್ಯಾಶ್ ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ” ಎಂದಿದ್ದಾರೆ.
ಮಾತ್ರವಲ್ಲದೆ, ಅವರೂ ಗಿಡವನ್ನು ನೆಟ್ಟು ಅದರೊಂದಿಗಿನ ಫೋಟೋವನ್ನು ತಮ್ಮ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ.
On the eve of #WorldEnvironmentDay happy to launch #SelfiewithSapling campaign. I urge all to join this campaign, plant a sapling and post the selfie at your social media with hashtag #SelfiewithSapling.@moefcc ,@UNEnvironment @MIB_India @PIB_India @UNinIndia #BeatAirPollution pic.twitter.com/csIs1xgvTj
— Prakash Javadekar (@PrakashJavdekar) June 4, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.