ಮೊರಾದಬಾದ್: ಉತ್ತರಪ್ರದೇಶದ ಮೊರಾದಬಾದಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಹಿಳಾ ಸುರಕ್ಷತೆಗಾಗಿ ಜಿಪಿಎಸ್ ಹೊಂದಿದ ಡ್ರೋನ್ ಸೆಕ್ಯೂರಿಟಿ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವ್ಯವಸ್ಥೆಯು ಚಪ್ಪಲಿಯಲ್ಲಿನ ಸರ್ಕ್ಯುಟ್ ಅನ್ನು ಬಳಸುವ ಕಾರಣ ಇದನ್ನು ‘ಸ್ಯಾಂಡಲ್ ಡ್ರೋನ್’ ಎಂದು ಕರೆದಿದ್ದಾರೆ. ಈ ಚಪ್ಪಲಿಯನ್ನು ಧರಿಸಿದ ಮಹಿಳೆಯರು ಅಪಾಯಕ್ಕೊಳಗಾದ ಪಕ್ಷದಲ್ಲಿ ಡ್ರೋನ್ಗೆ ಅಲರಾಂ ಹೋಗುತ್ತದೆ.
ಚಪ್ಪಲಿಯಲ್ಲಿನ ಪ್ಯಾನಿಕ್ ಬಟನ್ ಅನ್ನು ಮೃದುವಾಗಿ ಒತ್ತಿದರೆ, ಅದು ಶಾಕ್ ಸಿಸ್ಟಮ್ ಅನ್ನು ಸೃಷ್ಟಿಸುತ್ತದೆ, ಈ ಚಪ್ಪಲಿಯಿಂದ ಮಹಿಳೆ ದುಷ್ಕರ್ಮಿಗೆ ಬಾರಿಸಿದರೆ ಆತನಿಗೆ ಶಾಕ್ ಹೊಡೆಯುತ್ತದೆ.
ಒಮ್ಮೆ ಮಹಿಳೆ ಅಪಾಯದ ಸಿಗ್ನಲ್ ಅನ್ನು ಕಳುಹಿಸಿದರೆ, ಜಿಪಿಎಸ್ ಬಳಸಿ ಡ್ರೋನ್ ಆಕೆಯ ಬಳಿ ಬರುತ್ತದೆ ಮತ್ತು ಆಕೆಯ ಅಕ್ಕಪಕ್ಕದಲ್ಲಿರುವ ಜನರಿಗೆ ಅಲರಾಂ ಸೌಂಡ್ ಬಾರಿಸಿ ಆಕೆಯ ಸಹಾಯಕ್ಕೆ ಧಾವಿಸುವಂತೆ ಮಾಡುತ್ತದೆ.
“ಭಾರತದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ನಾವು ಚಪ್ಪಲಿ ಮತ್ತು ಡ್ರೋನ್ ಅನ್ನು ಬಳಸಿ ಸುರಕ್ಷತಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಚಪ್ಪಲಿಯಲ್ಲಿ ಪ್ಯಾನಿಕ್ ಬಟನ್ ಇದ್ದು, ಅಪಾಯದಲ್ಲಿದ್ದಾಗ ಅದನ್ನು ಪ್ರೆಸ್ ಮಾಡಬೇಕು. ಅದು ಶಾಕ್ ಸಿಸ್ಟಮ್ ಅನ್ನು ಜನರೇಟ್ ಮಾಡುತ್ತದೆ, ದುಷ್ಕರ್ಮಿಗೆ ಹೊಡೆಯಲು ಇದನ್ನು ಬಳಸಬಹುದು” ಎಂದು ಈ ಪ್ರಾಜೆಕ್ಟ್ನಲ್ಲಿ ಭಾಗಿಯಾದ ವಿದ್ಯಾರ್ಥಿಗಳಲ್ಲಿ ಒಬ್ಬನಾದ ದಿವಾಕರ್ ಶರ್ಮಾ ಹೇಳಿದ್ದಾನೆ.
ಪ್ಯಾನಿಕ್ ಬಟನ್ ಎಲೆಕ್ಟ್ರಿಕ್ ಶಾಕ್ ಸೃಷ್ಟಿಸುವುದು ಮಾತ್ರವಲ್ಲದೇ, ಡ್ರೋನ್ ತನ್ನತ್ತ ಬರುವಂತೆಯೂ ಮಾಡುತ್ತದೆ.
ಡ್ರೋನ್ ಮಹಿಳೆ ಇರುವ ಸ್ಥಳದ ಮಾಹಿತಿಯನ್ನು ಪೊಲೀಸರಿಗೆ ಮತ್ತು ಆಕೆಯ ಕುಟುಂಬಿಕರಿಗೆ ಕಳುಹಿಸಿಕೊಡುತ್ತದೆ. ಮಾತ್ರವಲ್ಲ ಪೊಲೀಸರಿಗೆ ತನಿಖೆಗೆ ಅನುಕೂಲವಾಗುವಂತೆ ವೀಡಿಯೋವನ್ನೂ ಮಾಡುತ್ತದೆ.
ಈ ವ್ಯವಸ್ಥೆಗೆ ಪೇಟೆಂಟ್ ಪಡೆಯಲು ಮತ್ತು ಕೆಲವು ಯುವತಿಯರಿಗೆ ಅದನ್ನು ನೀಡಲು ವಿದ್ಯಾರ್ಥಿಗಳ ತಂಡ ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.