ನವದೆಹಲಿ: ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ವಿಜಯದ ನಂತರ ಉದ್ಯಮ ಸ್ನೇಹಿ ಕ್ರಮಗಳ ನಿರೀಕ್ಷೆಗಳು ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಸಾಗರೋತ್ತರ ಹೂಡಿಕೆದಾರರು ಕಳೆದ ತಿಂಗಳು ಅಂದರೆ ಮೇ ತಿಂಗಳಲ್ಲಿ ಭಾರತೀಯ ಬಂಡವಾಳ ಮಾರುಕಟ್ಟೆಗಳಿಗೆ ಸುಮಾರು 9 ಸಾವಿರ ಕೋಟಿ ರೂಪಾಯಿಗಳನ್ನು ಹರಿಸಿದ್ದಾರೆ.
ಅಚ್ಚರಿಯೆಂದರೆ, ವಿದೇಶಿ ಹೂಡಿಕೆದಾರರು ಮೇ ಮೊದಲ ಮೂರು ವಾರಗಳ ಕಾಲ ನಿವ್ವಳ ಮಾರಾಟಗಾರರಾಗಿದ್ದರು, ಆದರೆ ಚುನಾವಣಾ ಫಲಿತಾಂಶಗಳ ಘೋಷಣೆಗೆ ಕೆಲ ದಿನಗಳ ಮುಂಚೆಯೇ ಈ ಟ್ರೆಂಡ್ ಬದಲಾಗಿ ಅವರು ಹೂಡಿಕೆಯ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದಾರೆ.
ಇತ್ತೀಚಿನ ಠೇವಣಿಗಳ ಮಾಹಿತಿಯ ಪ್ರಕಾರ, ವಿದೇಶಿ ಬಂಡವಾಳ ಹೂಡಿಕೆದಾರರು (FPIಗಳು) 7,920 ಕೋಟಿ ರೂಪಾಯಿಗಳನ್ನು ಇಕ್ವಿಟಿಗಳಿಗೆ ಮತ್ತು 1,111 ಕೋಟಿ ರೂಪಾಯಿಗಳನ್ನು ಸಾಲ ಮಾರುಕಟ್ಟೆಯಲ್ಲಿ ಮೇ 31 ರಿಂದ ಎರಡನೆಯ ಅವಧಿಯಲ್ಲಿ ಹೂಡಿಕೆ ಮಾಡಿದ್ದಾರೆ. ಇದು ಒಟ್ಟು ಹೂಡಿಕೆಯನ್ನು 9,031 ಕೋಟಿ ರೂ.ಗೆ ತೆಗೆದುಕೊಂಡು ಹೋಗಿದೆ.
ಇದಕ್ಕೂ ಮುಂಚೆ, ವಿದೇಶಿ ಹೂಡಿಕೆದಾರರು ಎಪ್ರಿಲ್ ತಿಂಗಳಲ್ಲಿ 16,093 ಕೋಟಿ ರೂಪಾಯಿಗಳನ್ನು, ಮಾರ್ಚ್ನಲ್ಲಿ 45,981 ಕೋಟಿ ರೂ. ಮತ್ತು ಫೆಬ್ರವರಿಯಲ್ಲಿ 11,182 ಕೋಟಿ ರೂಪಾಯಿಗಳನ್ನು ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.