ನವದೆಹಲಿ: ಉತ್ತರ ಭಾರತದಲ್ಲಿ ಸೂರ್ಯನ ಪ್ರತಾಪಕ್ಕೆ ಜನ ಕಂಗಾಲಾಗಿ ಹೋಗುತ್ತಿದ್ದಾರೆ. ಇನ್ನು ಎರಡು ದಿನಗಳ ಕಾಲ ಬಿಸಿಗಾಳಿ ಬೀಸಲಿರುವ ಪರಿಣಾಮ ಹೊರಗಡೆ ಓಡಾಡದಿರುವುದು ಸೂಕ್ತ ಎಂಬ ಮುನ್ನೆಚ್ಚರಿಕೆಗಳನ್ನು ನೀಡಲಾಗುತ್ತಿದೆ. ಭಾನುವಾರ ವಿಶ್ವದ 15 ಅತೀ ಬಿಸಿಲ ಪ್ರದೇಶಗಳ ಪೈಕಿ ಉತ್ತರಭಾರತದ 10 ಪ್ರದೇಶಗಳು ಸ್ಥಾನ ಪಡೆದುಕೊಂಡಿದೆ.
ರಾಜಸ್ಥಾನದ ಚುರು ಮತ್ತು ಶ್ರೀ ಗಂಗಾನಗರ್ ವಿಶ್ವದ ಅತೀ ಉಷ್ಣತೆಯ ಪ್ರದೇಶ ಎನಿಸಿಕೊಂಡಿದೆ. ಇಲ್ಲಿ ತಾಪಮಾನ 48.9 ಮತ್ತು 48.6 ಡಿಗ್ರಿ ಸೆಲ್ಸಿಯಸ್ ಇದೆ. ಬಳಿಕದ ಸ್ಥಾನವನ್ನು ಪಾಕಿಸ್ಥಾನದ ಜಾಕೋಬಬಾದ್ ಪಡೆದುಕೊಂಡಿದೆ. ಇಲ್ಲಿ ಉಷ್ಣಾಂಶ 48 ಡಿಗ್ರಿ ಸೆಲ್ಸಿಯಸ್ ಇದೆ ಎಂದು El Dorado ಹವಮಾನ ವೆಬ್ಸೈಟ್ ವರದಿ ಮಾಡಿದೆ. 47.4 ಡಿಗ್ರಿ ಸೆಲ್ಸಿಯಸ್ ಇರುವ ಉತ್ತರಪ್ರದೇಶದ ಬಂಡ, 47.2 ಡಿಗ್ರಿ ಸೆಲ್ಸಿಯಸ್ ಇರುವ ಹರಿಯಾಣದ ನರ್ನೌಲ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಭಾನುವಾರ ದೆಹಲಿ, ಜೈಪುರ, ಕೋಟ, ಹೈದರಾಬಾದ್ ಮತ್ತು ಲಕ್ನೋಗಳಲ್ಲಿ ತಪಾಮಾನ 45 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿತ್ತು. ತಣ್ಣನೆಯ ಸ್ಥಳಗಳು ಎಂದು ಕರೆಯಲ್ಪಡುವ ಶಿಮ್ಲಾ, ನೈನಿತಾಲ್ ಮತ್ತು ಶ್ರೀನಗರದಲ್ಲೂ ಕೂಡ ಸಾಮಾನ್ಯ ಮಟ್ಟಕ್ಕಿಂತ ತಾಪಮಾನ ಎರಡರಿಂದ ಮೂರು ಪಟ್ಟು ಹೆಚ್ಚಾಗಿತ್ತು. ಶಿಮ್ಲಾದಲ್ಲಿ ತಾಪಮಾನ 32 ಡಿಗ್ರಿ ಸಲ್ಸಿಯಸ್ , ನೈನಿತಾಲ್ನಲ್ಲಿ 33 ಡಿಗ್ರಿ ಸೆಲ್ಸಿಯಸ್ ಇತ್ತು.
ವರ್ಷದಿಂದ ವರ್ಷಕ್ಕೆ ತಾಪಮಾನ ಏರಿಕೆಯಾಗುತ್ತಲೇ ಹೋಗುತ್ತಿದ್ದು, 2010 ರಿಂದ 2018ರ ನಡುವೆ ಬಿಸಿಲ ಬೇಗೆ ತಾಳಲಾರದೆ ಸುಮಾರು 1,167 ಜನರು ಮೃತಪಟ್ಟಿದ್ದಾರೆ ಎಂದು ಕಳೆದ ಫೆಬ್ರವರಿಯಲ್ಲಿ ಸಂಸತ್ತಿಗೆ ನೀಡಿದ ವರದಿಯಲ್ಲಿ ತಿಳಿಸಲಾಗಿತ್ತು. ಬಯಲು ಪ್ರದೇಶಗಳಲ್ಲಿ 40 ಡಿಗ್ರಿ ಸೆಲ್ಸಿಯಸ್, ಕರಾವಳಿ ಪ್ರದೇಶಗಳಲ್ಲಿ 37 ಡಿಗ್ರಿ ಸೆಲ್ಸಿಯಸ್ ಮತ್ತು ಹಿಮಾಲಯ ಪ್ರದೇಶಗಳಲ್ಲಿ 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಎಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಗರಿಷ್ಠತೆಯನ್ನೂ ಮೀರಿ ತಾಪಮಾನ ಬೆಳೆಯುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.