ಕೊಟ್ಟಾಯಂ: ಸಾಧಿಸುವ ಛಲ ಇದ್ದರೆ ದೈಹಿಕ ನ್ಯೂನ್ಯತೆ ಒಂದು ನ್ಯೂನ್ಯತೆಯೇ ಅಲ್ಲ ಎಂಬುದನ್ನು ಕೇರಳದ ಕೊಟ್ಟಾಯಂನ 24 ವರ್ಷದ ಲತೀಶ ಅನ್ಸಾರಿ ತೋರಿಸಿಕೊಟ್ಟಿದ್ದಾರೆ. ಅಪರೂಪದ ಮೂಳೆ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ ಆಕ್ಸಿಜನ್ ಸಪೋರ್ಟ್ ಇಲ್ಲದೆ ಉಸಿರಾಡಲೂ ಆಗುವುದಿಲ್ಲ. ಅಂತಹ ಸ್ಥಿತಿಯಲ್ಲೂ ಅವರು ನಾಗರಿಕ ಸೇವಾ ಪರೀಕ್ಷೆಯನ್ನು ಬರೆದಿದ್ದಾರೆ.
ಕೇಂದ್ರ ನಾಗರಿಕ ಸೇವಾ ಮಂಡಳಿ ನಡೆಸಿದ ಪ್ರಾಥಮಿಕ ನಾಗರಿಕ ಸೇವಾ ಪರೀಕ್ಷೆಗೆ ವ್ಹೀಲ್ ಚೇರ್ ಮತ್ತು ಆಕ್ಸಿಜನ್ ಸಿಲಿಂಡರ್ ಮೂಲಕ ಆಗಮಿಸಿದ ಲತೀಶ ಎಲ್ಲಾ ಅಭ್ಯರ್ಥಿಗಳಂತೆಯೇ ಅಚ್ಚುಕಟ್ಟಾಗಿ ಪರೀಕ್ಷೆ ಬರೆದಿದ್ದಾರೆ.
ಲತೀಶ ಅವರು ಜನನದ ಬಳಿಕದಿಂದ ‘type II Osteogenesis Imperfecta’ (ಮೂಳೆ ರೋಗ) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವು ವರ್ಷಗಳಿಂದ pulmonary hypertension ಸಮಸ್ಯೆಯೂ ಅವರನ್ನು ಕಾಡುತ್ತಿದ್ದು, ಹೀಗಾಗಿ ಅವರಿಗೆ ಉಸಿರಾಡಲು ಆಕ್ಸಿಜನ್ ಸಿಲಿಂಡರ್ ಬೇಕೇ ಬೇಕು.
ಕುಬ್ಜವಾಗಿರುವ, ಸರಿಯಾಗಿ ನಡೆಯಲೂ ಆಗದ ಲತೀಶ ಅವರನ್ನು ಅವರ ತಂದೆ ಅನ್ಸಾರಿಯವರೇ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ಕೊಟ್ಟಾಯಂ ಜಿಲ್ಲಾಧಿಕಾರಿ ಪಿ.ಆರ್ ಸುಧೀರ್ ಬಾಬು ಅವರ ನೆರವಿನೊಂದಿಗೆ ಲತೀಶಳಿಗೆ ಎಕ್ಸಾಂ ಹಾಲ್ ಒಳಗಡೆ ಆಕ್ಸಿಜನ್ ಸಿಲಿಂಡರ್ ಹಾಕಿ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿತು.
ಕೇಂದ್ರ ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್ಸಿ) ಭಾನುವಾರ ದೇಶದ 72 ನಗರಗಳಲ್ಲಿ ಪರೀಕ್ಷೆಯನ್ನು ಆಯೋಜನೆಗೊಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.