ಅಯೋಧ್ಯಾ: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಡಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ ಎಂದು ಬಾಬ್ರಿ ಮಸೀದಿ ವಿವಾದದ ಪ್ರಮುಖ ಅರ್ಜಿದಾರ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
“ಮುಸ್ಲಿಮರು ಮೋದಿ ಆಡಳಿತದಡಿ ಸುರಕ್ಷತೆಯ ಭಾವದಲ್ಲಿದ್ದಾರೆ. ತಮ್ಮ ಧರ್ಮವನ್ನು ನಿರ್ಭೀತಿಯಿಂದ ಅನುಸರಿಸುತ್ತಿದ್ದಾರೆ” ಎಂದಿದ್ದಾರೆ.
“ಮುಸ್ಲಿಮರು ಬಿಜೆಪಿಯೊಂದಿಗಿದ್ದಾರೆ ಮತ್ತು ಬಿಜೆಪಿ ಮುಸ್ಲಿಮರೊಂದಿಗಿದೆ. ಎಲ್ಲಾ ಧರ್ಮದ ಜನರೂ ಬಿಜೆಪಿಯೊಂದಿಗಿದ್ದಾರೆ. ಬಿಜೆಪಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಜನಾದೇಶ ಸಿಗುತ್ತದೆ ಎಂದು ಯಾರೊಬ್ಬರೂ ನಿರೀಕ್ಷೆ ಮಾಡಿರಲಿಕ್ಕಿಲ್ಲ” ಎಂದಿದ್ದಾರೆ.
“ಮುಸ್ಲಿಮರು ದೇಶಕ್ಕಾಗಿ ದುಡಿಯಲು ಬಯಸುತ್ತಾರೆ. ದೇಶಕ್ಕೆ ಯಾವುದೇ ಅಪಚಾರ ಮತ್ತು ಹಾನಿಯುಂಟು ಮಾಡುವುದು ಅವರಿಗೆ ಬೇಕಾಗಿಲ್ಲ” ಎಂದಿದ್ದಾರೆ.
ರಾಮ ದೇಗುಲದ ಪ್ರಮುಖ ಅರ್ಚಕ ಸತ್ಯೇಂದ್ರ ದಾಸ್ ಅವರು ಕೂಡ ಅನ್ಸಾರಿ ಮಾತನ್ನು ಪುನರುಚ್ಚರಿಸಿದ್ದಾರೆ. “ಬಿಜೆಪಿ ಆಡಳಿತದಲ್ಲಿ ಮುಸ್ಲಿಮರಿಗೆ ಕಷ್ಟ ಎದುರಾಗಿದೆ ಎಂದು ಪ್ರತಿಪಕ್ಷಗಳು ಭಯ ಹುಟ್ಟಿಸಿದವು. ಆದರೆ ಅದು ಸುಳ್ಳು. ಅದು ಎಂದಿಗೂ ಸಾಧ್ಯವೂ ಆಗಲಾರದು. ನಮ್ಮ ಪ್ರಧಾನಿಗಳಿಗೆ ಜಾತಿ, ಮತದ ಬೇಧವಿಲ್ಲದೆ ಎಲ್ಲರೂ ಅವರಿಗೆ ಭಾರತೀಯರು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.