ನವದೆಹಲಿ: ಸರಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) 2018-19 ರಲ್ಲಿ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಲಾಭಾಂಶದಲ್ಲಿ ಬಂಪರ್ ಬೆಳವಣಿಗೆಯನ್ನು ಕಂಡಿದೆ. ಕಂಪೆನಿಯ ನಿವ್ವಳ ಏಕೀಕೃತ ಲಾಭವು ಗಮನಾರ್ಹವಾದ ಶೇ. 148 ರಷ್ಟು ಏರಿಕೆಯನ್ನು ಕಂಡಿದ್ದು, 17,462.18 ಕೋಟಿ ರೂ.ಗೆ ತಲುಪಿದೆ. ಇದು 2017-18ರಲ್ಲಿ 7,038.44 ಕೋಟಿ ರೂ ಆಗಿತ್ತು.
ಲಾಭದ ಜೊತೆಗೆ, ಕಂಪನಿಯ ನಿವ್ವಳ ಆದಾಯ ಕೂಡ ಏರಿಕೆಯನ್ನು ಕಂಡಿದೆ. ಸಿಐಎಲ್ ಒಟ್ಟು ಆದಾಯ 91,625.25 ಕೋಟಿಗಳಿಂದ 1,05,420.62 ಕೋಟಿಗಳಿಗೆ ಏರಿದ್ದು ಶೇ.15ರಷ್ಟು ಜಿಗಿತವನ್ನು ಕಂಡಿದೆ.
ಇದಲ್ಲದೆ, ಸಾರ್ವಜನಿಕ ವಲಯದ ಈ ಕಂಪೆನಿಯು 2018-19-19ರ ಸಾಲಿನಲ್ಲಿ 606.89 ಮಿಲಿಯನ್ ಟನ್ಗಳಷ್ಟು ಕಲ್ಲಿದ್ದಲನ್ನು ಉತ್ಪಾದಿಸಿದೆ. ಅದರ ಹಿಂದಿನ ವರ್ಷದಲ್ಲಿ 567.37 ಮಿಲಿಯನ್ ಟನ್ಗಳಷ್ಟು ಕಲ್ಲಿದ್ದಲನ್ನು ಉತ್ಪಾದಿಸಿದೆ. 2018-19ರಲ್ಲಿ ಕಂಪನಿಯ ವಾರ್ ಕೋಲ್ ಆಫ್-ಟೇಕ್ ಸಹ 580.239 ಮಿಲಿಯನ್ ಟನ್ಗಳಿಂದ 608.14 ಮಿಲಿಯನ್ ಟನ್ಗಳಿಗೆ ಏರಿದೆ.
ಜನವರಿ-ಮಾರ್ಚ್ ತ್ರೈಮಾಸಿಕವೊಂದೇ ನಿವ್ವಳ ಏಕೀಕೃತ ಲಾಭದಲ್ಲಿ ನಾಲ್ಕು ಪಟ್ಟು ಜಿಗಿತವನ್ನು ಕಂಡಿದ್ದು, ಕೇವಲ ಒಂದು ವರ್ಷದಲ್ಲಿ ರೂ.1.302.6 ಕೋಟಿ ರೂ.ನಿಂದ ರೂ.6,024.2 ಕೋಟಿಗೆ ಏರಿಕೆ ಕಂಡಿದೆ.
ಹೆಚ್ಚಿನ ಮಾರಾಟ ಮತ್ತು ಕಡಿಮೆ ವೆಚ್ಚದ ಕಾರಣ ಇದು ಸಾಧ್ಯವಾಗಿದೆ. ಜನವರಿ-ಮಾರ್ಚ್ ಅವಧಿಯಲ್ಲಿ ಕಂಪನಿಯ ನಿವ್ವಳ ಖರ್ಚು 27,369.5 ಕೋಟಿ ರೂ.ನಿಂದ 21,473.1 ಕೋಟಿ ರೂ.ಗೆ ಕುಸಿದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.