ನವದೆಹಲಿ: ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ದೇಶವನ್ನು ತಿರುಗಿ ಪಕ್ಷವನ್ನು ಸಂಘಟಿಸಿದ ಚಾಣಾಕ್ಯ ಅಮಿತ್ ಶಾ ಅವರು ಈಗ ನರೇಂದ್ರ ಮೋದಿ ಸರ್ಕಾರದ ಸಂಪುಟ ಸಚಿವರಾಗಿದ್ದಾರೆ. ಅವರಿಗೆ ಉನ್ನತ ಖಾತೆ ಸಿಗುವ ನಿರೀಕ್ಷೆ ಎಲ್ಲರಲ್ಲೂ ಇದೆ. ಮೂರನೆಯವರಾಗಿ ಪ್ರಮಾಣವಚನವನ್ನು ಸ್ವೀಕಾರ ಮಾಡಿದರೂ ಮೋದಿ ಸಂಪುಟದಲ್ಲಿ ಅವರು ಎರಡನೇ ಪ್ರಭಾವಿ ಸಚಿವರಾಗುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಈ ಹಿಂದೆ ಪಕ್ಷದ ಹಿರಿಯ ಧುರೀಣ ಎಲ್. ಕೆ. ಅಡ್ವಾಣಿ ಅವರು ಪ್ರತಿನಿಧಿಸುತ್ತಿದ್ದ ಗುಜರಾತಿನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವ ಅಮಿತ್ ಶಾ ಅವರು ಸಂಪುಟವನ್ನು ಸೇರಿರುವುದು ಸರ್ಕಾರಕ್ಕೆ ಆನೆ ಬಲವನ್ನು ತಂದುಕೊಟ್ಟಿದೆ. ತಂತ್ರಗಾರಿಕೆಯನ್ನು ಹೆಣೆಯುವುದರಲ್ಲಿ ಚಾಣಾಕ್ಷ ಎನಿಸಿರುವ ಅವರು, ತಮಗೆ ದೊರೆತ ಖಾತೆಯನ್ನು ಅತ್ಯಂತ ನಿಪುಣತೆಯಿಂದ ಮುನ್ನಡೆಸುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ.
ರಾಷ್ಟ್ರಾಧ್ಯಕ್ಷರಾಗಿ ಅವರ ಅಧಿಕಾರ ಅವಧಿ ಈ ವರ್ಷದ ಅಂತ್ಯದವರೆಗೆ ಮುಂದುವರೆಯಲಿದೆ, ಹೀಗಾಗಿ ಅವರು ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರ, ಹರಿಯಾಣ ಮುಂತಾದ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಬರುತ್ತಿರುವ ಹಿನ್ನಲೆಯಲ್ಲಿ ಅವರ ಮುಂದುವರಿಕೆ ಅತ್ಯಂತ ಅವಶ್ಯಕವೂ ಆಗಿರಲಿದೆ.
ಒಂದು ಮೂಲದ ಪ್ರಕಾರ ಅಮಿತ್ ಶಾ ಅವರಿಗೆ ವಿತ್ತ ಖಾತೆ ದೊರಕುವ ಸಾಧ್ಯತೆ ಇದೆ. ಆದರೆ ಇದುವರೆಗೆ ಅದು ಖಚಿತಗೊಂಡಿಲ್ಲ.
ಮೋದಿ ಸರ್ಕಾರದ ಪ್ರಭಾವಿ ಸಚಿವನಾಗಿದ್ದ ಜೆಪಿ ನಡ್ಡಾ ಅವರನ್ನು ಈ ಬಾರಿ ಸಂಪುಟಕ್ಕೆ ಸೇರ್ಪಡೆಗೊಳಿಸಲಾಗಿಲ್ಲ. ಹೀಗಾಗಿ ರಾಷ್ಟ್ರಾಧ್ಯಕ್ಷ ಸ್ಥಾನ ಅವರಿಗೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.