ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಅವಧಿಗೆ ದೇಶದ ಪ್ರಧಾನಿಯಾಗಿ ಇಂದು ಸಂಜೆ 7 ಗಂಟೆಗೆ ಪ್ರಮಾಣವಚನವನ್ನು ಸ್ವೀಕಾರ ಮಾಡಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸುಮಾರು 8,000 ಅತಿಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ವಿವಿಧ ದೇಶದ ಗಣ್ಯರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರುಗಳು ಪ್ರಮಾಣವಚನಕ್ಕೆ ಸಾಕ್ಷಿಯಾಗಲಿದ್ದಾರೆ. ಪ್ರಮಾಣವಚನಕ್ಕೆ ಆಗಮಿಸಲಿರುವ ಅತಿಥಿಗಳಿಗೆ ಟೀ, ಉಪಾಹಾರ ಇರಲಿದೆ ಮತ್ತು ನಾಯಕರುಗಳಿಗೆ ರಾಷ್ಟ್ರಪತಿಗಳು ಖಾಸಗಿ ಔತಣಕೂಟವನ್ನು ಏರ್ಪಡಿಸಲಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವ ಜನಸಮೂಹವು ನರೇಂದ್ರ ಮೋದಿಯವರು ಪಡೆದ ಜನಾದೇಶವನ್ನು ಪ್ರತಿ ಬಿಂಬಿಸಲಿದೆ.
ಪ್ರಮಾಣವಚನ ಸ್ವೀಕಾರದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಾರ್ ಮೆಮೋರಿಯಲ್ಗೆ ತೆರಳಿ ಹುತಾತ್ಮರಿಗೆ ನಮನ ಸಲ್ಲಿಸಿದರು. ಸರಣಿ ಟ್ವೀಟ್ ಮೂಲಕ ಮಹಾತ್ಮ ಗಾಂಧೀಜಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಭಾರತೀಯ ಯೋಧರನ್ನು ಸ್ಮರಿಸಿ ಕೊಂಡಿರುವ ಮೋದಿ ಈ ವಿಶೇಷ ದಿನದಂದು ಬಾಪೂಜಿ ಅವರ ಚಿಂತನೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸಲು ಬಡವರ ಜೀವನವನ್ನು ಹಿಂದುಳಿದವರ ಜೀವನವನ್ನು ನಮಗೆ ನಿರಂತರ ಪ್ರೇರಣೆ ನೀಡಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ರಾಜಕೀಯ ಗುರು ಅಟಲ್ ಜೀ ಅವರಿಗೂ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು.
Paid tributes to respected Bapu at Rajghat.
This year, we mark the 150th Jayanti of Bapu. May this special occasion further popularise Bapu’s noble ideals and continue inspiring us to empower the lives of the poor, downtrodden and marginalised. pic.twitter.com/7HLOgdXzzx
— Narendra Modi (@narendramodi) May 30, 2019
We remember beloved Atal Ji every single moment.
He would have been very happy to see BJP get such a great opportunity to serve people.
Motivated by Atal Ji’s life and work, we will strive to enhance good governance and transform lives.
Here are glimpses from ‘Sadaiv Atal.’ pic.twitter.com/7LXNkU0DP4
— Narendra Modi (@narendramodi) May 30, 2019
India is proud of all those brave men and women martyred in the line of duty.
Paid tributes to our brave soldiers at the Rashtriya Samar Smarak.
Our Government will leave no stone unturned to safeguard India’s unity and integrity. National security is our priority. pic.twitter.com/jMR2tGOJDH
— Narendra Modi (@narendramodi) May 30, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.