ನವದೆಹಲಿ : ಭಾರತೀಯ ವಾಯು ಸೇನೆಯ ಅಸಾಧಾರಣ ಕಾರ್ಯಕ್ಷಮತೆಯುಳ್ಳ ರಷ್ಯಾದ ಎಎನ್-32 ವಿಮಾನವು ಜೈವಿಕ ಇಂಧನವನ್ನು ಬಳಸಿ ಹಾರಾಟ ಮಾಡಬಹುದೆಂದು ಔಪಚಾರಿಕವಾಗಿ ಪ್ರಮಾಣೀಕರಿಸಲಾಯಿತು. 10% ರಷ್ಟು ಸಂಯೋಜಿತ ಜೈವಿಕ ವಾಯು ಇಂಧನದ ಮಿಶ್ರಣದೊಂದಿಗೆ ಈ ವಿಮಾನ ಸಮರ್ಥವಾಗಿ ಹಾರಾಟ ನಡೆಸಿದೆ. ಚಂಡೀಗಢದ ಏರೋ-ಇಂಜಿನ್ ಪರೀಕ್ಷಾ ಕೇಂದ್ರದಲ್ಲಿ ಏರ್ ಕಮಾಂಡರ್ ಸಂಜೀವ ಘುರಾಟಿಯಾ ಅವರಿಂದ ಪ್ರಮಾಣಪತ್ರವನ್ನು ಸ್ವೀಕರಿಸಲಾಗಿದೆ.
ಅಧಿಕೃತ ಮಾಹಿತಗಳ ಪ್ರಕಾರ, ಭಾರತೀಯ ವಾಯು ಸೇನೆ ಕಳೆದ ಒಂದು ವರ್ಷದಿಂದ ಈ ಹಸಿರು ವಿಮಾನಯಾನ ಇಂಧನದ ಪರೀಕ್ಷೆ, ಮೌಲ್ಯಮಾಪನ ಮತ್ತು ಪ್ರಯೋಗಗಳನ್ನು ಸರಣಿಯಾಗಿ ಕೈಗೊಳ್ಳುತ್ತಾ ಬಂದಿದೆ. ಅಂತಾರಾಷ್ಟ್ರೀಯ ವಾಯುಯಾನ ಮಾನದಂಡಗಳೊಂದಿಗೆ ಈ ತಪಾಸಣೆಯನ್ನು ಕೈಗೊಳ್ಳಲಾಗಿದೆ. ದೇಶಿಯ ನಿರ್ಮಿತ ಜೈವಿಕ ಇಂಧನವನ್ನು ಬಳಸಿಕೊಂಡು ನಿಖರವಾದ ಫಲಿತಾಂಶ ನೀಡುವಲ್ಲಿ ಐಎಎಫ್ ಸಫಲವಾಗಿದೆ ಎಂದು ಹೇಳಿದ್ದಾರೆ.
IAF’s AN-32 certified to fly on blended aviation fuel containing up to 10% of indigenous Bio-Jet Fuel. Air Commodore Sanjiv Ghuratia received approval certificate from Mr P Jayapal, Chief Executive CEMILAC at Aero-Engine Test Facilities, Chandigarh, today.https://t.co/yUXMuzCZno pic.twitter.com/fXqlQjhqbh
— Indian Air Force (@IAF_MCC) May 24, 2019
ಬಯೋ-ಜೆಟ್ ಇಂಧನವನ್ನು ಮೊದಲ ಬಾರಿಗೆ 2013ರಲ್ಲೇ ತಯಾರಿಸಲಾಗಿತ್ತಾದರೂ, ಪರೀಕ್ಷೆ ಮಾಡಲು ಸರಿಯಾದ ಸೌಲಭ್ಯಗಳ ಕೊರತೆಯಿಂದಾಗಿ ಪರೀಕ್ಷೆ ಮಾಡಲು ಆಗಿರಲಿಲ್ಲ. ತದನಂತರ 27 ಜುಲೈ 2018 ರಂದು ಐಎಎಫ್ನ ಎಲ್ಲಾ ಸಂಪನ್ಮೂಲಗಳನ್ನು ಬಳಸಿ ದೇಶಿಯವಾಗಿ ಜೈವಿಕ ಇಂಧನವನ್ನು ತಯಾರಿಸಿ ಪರೀಕ್ಷಿಸುವ ಅನುಮತಿಯನ್ನು ಏರ್ ಸ್ಟಾಫ್ ಮುಖ್ಯಸ್ಥ ಬಿ.ಎಸ್ ಧನೋವಾ ಘೋಷಿಸಿದರು.
ಅಲ್ಲಿಂದೀಚೆಗೆ, ಐಎಎಫ್ನ ವಿಮಾನ ಪರೀಕ್ಷಾ ಸಿಬ್ಬಂದಿ ಮತ್ತು ಇಂಜಿನಿಯರುಗಳು ಅಂತರಾಷ್ಟ್ರೀಯ ಮಾನದಂಡಗಳ ಪ್ರಕಾರ ಈ ಇಂಧನ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿದ್ದಾರೆ. ಈ ಜೈವಿಕ ಇಂಧನವನ್ನು ತಯಾರಿಸಲು ರೈತರು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ದೊರೆಯುವ ಟ್ರೀ ಬೊರ್ನ್ ಆಯಿಲ್ಸ್ (ಟಿಬಿಒ) ನಿಂದ ಉತ್ತತ್ತಿಯಾಗುವ ಎಣ್ಣೆಯನ್ನು ಬಳಸಲಾಗುತ್ತದೆ. ಇದರಿಂದ ’ಮೇಕ್ ಇನ್ ಇಂಡಿಯಾ’ ಯೋಜನೆಗೆ ಉತ್ತೇಜನ ನೀಡುವಲ್ಲಿ ಇದು ಒಂದು ದೊಡ್ಡ ಹೆಜ್ಜೆಯಾಗಿದ್ದು, ರೈತರ ಮತ್ತು ಬುಡಕಟ್ಟು ಜನರ ಆದಾಯವನ್ನು ಗಣನೀಯವಾಗಿ ವೃದ್ಧಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.