303 ಸಂಸತ್ ಸದಸ್ಯರೊಂದಿಗೆ, ಭಾರತೀಯ ಜನತಾ ಪಕ್ಷವು 2019 ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ದಾಖಲೆಯ ಜಯಗಳಿಸಿ, ಲೋಕಸಭೆಯಲ್ಲಿ ಬಹುಮತ ಪಡೆದ ಪಕ್ಷವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ರಾಷ್ಟ್ರೀಯ ಪಕ್ಷಗಳಿಂದ 397 ಸಂಸದರು ಆಯ್ಕೆಯಾಗಿದ್ದಾರೆ. ಇದರಲ್ಲಿ 303 ಬಿಜೆಪಿ ಸಂಸದರು, 52 ಕಾಂಗ್ರೆಸ್ ಸಂಸದರು. ರಾಜ್ಯ ಪಕ್ಷಗಳ ಪೈಕಿ ಡಿಎಂಕೆ 23, ವೈಎಸ್ಆರ್ಪಿ 22 ಮತ್ತು ಟಿಎಂಸಿ 22 ಸ್ಥಾನಗಳನ್ನು ಗೆದ್ದುಕೊಂಡಿದೆ.
ಈ ಲೋಕಸಭಾ ಚುನಾವಣೆಯಲ್ಲಿ ಹೊಸದಾಗಿ ಚುನಾಯಿತರಾದ ಯುವ ಸಂಸದರು ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲಿದ್ದಾರೆ ಹಾಗೂ ಮೋದಿಯವರ ’ನ್ಯೂ ಇಂಡಿಯಾ’ ಕನಸನ್ನು ನನಸು ಮಾಡುವತ್ತ ಹೆಜ್ಜೆ ಹಾಕಲಿದ್ದಾರೆ. ಹೊಸ ಪೀಳಿಗೆಯ ಹೊಸ ಐಡಿಯಾಗಳು ಮತ್ತು ಎನ್ಡಿಎ ಸರ್ಕಾರದ ಅಭಿವೃದ್ಧಿಯುತ ಮಾರ್ಗಸೂಚಿಯು ದೇಶವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲಿದೆ.
17 ನೇ ಲೋಕಸಭೆಯ ಸಂಸದರಲ್ಲಿ ಶೇ.12 ರಷ್ಟು ಸಂಸತ್ ಸದಸ್ಯರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 16 ನೇ ಲೋಕಸಭೆಯಲ್ಲಿ ಇದು 8% ಇತ್ತು.
542 ಕ್ಷೇತ್ರಗಳಿಗೆ ಅಂತಿಮ ಫಲಿತಾಂಶವನ್ನು ಘೋಷಿಸಲಾಗಿದೆ. ತಮಿಳುನಾಡಿನ ವೆಲ್ಲೂರ್ ಕ್ಷೇತ್ರದ ಚುನಾವಣೆಯನ್ನು ಮುಂದೂಡಲ್ಪಟ್ಟಿದೆ. ಈ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಗೆಲುವಿನ ಬಗ್ಗೆ ಸಂಶಯ ಮೂಡಿತ್ತು.
ಒಟ್ಟು 8 ಮಹಿಳಾ ಸಂಸದರು, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಾರಾಷ್ಟ್ರ ಬಿಜೆಪಿಯಿಂದ ಚುನಾಯಿತರಾಗಿದ್ದಾರೆ. ಹಾಗೂ ಸಂಸತ್ತಿನ ಕೆಳಮನೆಗೆ 48 ಸಂಸತ್ ಸದಸ್ಯರನ್ನು ಕಳುಹಿಸಿದೆ.
ಮಹಾರಾಷ್ಟ್ರದ 48 ಸಂಸದರಲ್ಲಿ 20 ಸದಸ್ಯರು ಈ ಲೋಕಸಭೆಯಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡಿದ್ದಾರೆ. ಅವುಗಳಲ್ಲಿ 11 ಬಿಜೆಪಿ, ಶಿವಸೇನೆಯಿಂದ ನಾಲ್ಕು, ಎನ್ಸಿಪಿಯಿಂದ ಇಬ್ಬರು, ಒಬ್ಬರು ಎನ್ಸಿಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಮತ್ತು ಎಐಐಎಂಐನಿಂದ ತಲಾ ಒಬ್ಬರು ಸ್ಪರ್ಧಿಸಿದ್ದರು.
ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ, 39 ಪ್ರತಿಶತ ಸಂಸದರು ತಮ್ಮ ವೃತ್ತಿಯನ್ನು ರಾಜಕೀಯ ಮತ್ತು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಶೇ.38 ರಷ್ಟು ಸಂಸದರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. 23% ಸಂಸದರು ಉದ್ಯಮಿಗಳು ಮತ್ತು ಕೇವಲ 4% ಸಂಸದರು ವಕೀಲ ವೃತ್ತಿಯನ್ನು ನಡೆಸುತ್ತಿದ್ದಾರೆ.
ಲೋಕಸಭೆಯಲ್ಲಿ ಮಹಿಳಾ ಸಂಸದರ ಪ್ರತಿನಿಧಿತ್ವವು ನಿಧಾನವಾಗಿ ಏರಿಕೆ ಕಾಣುತ್ತಿದೆ. 1ನೇ ಲೋಕಸಭೆಯಲ್ಲಿ 5% ನಷ್ಟಿದ್ದ ಸಂಖ್ಯೆಯು 17ನೇ ಲೋಕಸಭೆಯಲ್ಲಿ 14% ಗೆ ಸುಧಾರಣೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.