ನವದೆಹಲಿ: ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಅಭೂತಪೂರ್ವ ಗೆಲುವಿನೊಂದಿಗೆ ಮತ್ತೊಂದು ಅವಧಿಗೆ ಸರ್ಕಾರ ರಚಿಸಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಮೂಲದ ಕೆನಡಾ ಉದ್ಯಮಿ, ಬಿಲಿಯನೇರ್ ಹೂಡಿಕೆದಾರ ಮತ್ತು ಫೇರ್ಫಾಕ್ಸ್ ಫೈನಾನ್ಸಿಯಲ್ ಲಿಮಿಟೆಡ್ ಹೋಲ್ಡಿಂಗ್ಸ್ ಮುಖ್ಯಸ್ಥ ಪ್ರೇಮ್ ವತ್ಸಾ ಅವರು ಭಾರತದ ಆರ್ಥಿಕ ಪ್ರಗತಿಯ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರವೇ ಫೇರ್ಫಾಕ್ಸ್ ಇಂಡಿಯಾವನ್ನು ಸ್ಥಾಪನೆ ಮಾಡಿದೆವು ಎಂದಿರುವ ಅವರು, ಮೋದಿ ಮತ್ತೆ ಐದು ವರ್ಷಗಳ ಕಾಲ ಪ್ರಧಾನಿಯಾಗಿ ಮುಂದುವರಿಯುವುದು ಭಾರತೀಯ ಆರ್ಥಿಕತೆಗೆ ಪರಿವರ್ತನಾಶೀಲವಾಗಲಿದೆ ಎಂದಿದ್ದಾರೆ.
ಈ ವರ್ಷಗಳಲ್ಲಿ ಫೇರ್ಫಾಕ್ಸ್ ಇಂಡಿಯಾಗಾಗಿ ನಾವು ಹಣವನ್ನು ಹೂಡಿಕೆ ಮಾಡಿದ್ದೇವೆ. ಮುಂಬರುವ ವರ್ಷಗಳಲ್ಲಿ ಭಾರತಕ್ಕೆ ಇನ್ನಷ್ಟು ಹಣವನ್ನು ಹೂಡಿಕೆ ಮಾಡಲಿದ್ದೇವೆ. ಭವಿಷ್ಯದಲ್ಲಿ ಹಣವನ್ನು ಹೂಡಿಕೆ ಮಾಡಲು ಭಾರತ ಏಕೈಕ ಸುರಕ್ಷಿತ ತಾಣವಾಗಲಿದೆ ಎಂಬುದು ನಮ್ಮ ನಂಬಿಕೆಯಾಗಿದೆ ಎಂದಿದ್ದಾರೆ.
ಪ್ರಸ್ತುತ ನಮ್ಮ ಸಂಸ್ಥೆಯು ಭಾರತದಲ್ಲಿ 3.77 ಡಾಲರ್ಗಳನ್ನು ಹೂಡಿಕೆ ಮಾಡಿದೆ. ಮೋದಿಯವರು ಎಲ್ಲರನ್ನೂ ಒಳಗೊಂಡ ಆರ್ಥಿಕ ಪ್ರಗತಿಗೆ ಹೆಚ್ಚಿನ ಗಮನವನ್ನು ನೀಡಿರುವುದಾಗಿ ಹೇಳಿದ್ದಾರೆ, ಹೀಗಾಗಿ ನಮಗೆ ಅವರ ನಿರ್ಧಾರಗಳ ಬಗ್ಗೆ ಯಾವುದೇ ಆತಂಕವಿಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.