ನವದೆಹಲಿ : ಲೋಕಸಭಾ ಚುನಾವಣೆಗಳಲ್ಲಿ ಅಭೂತಪೂರ್ವ ಯಶಸ್ಸನ್ನು ಗಳಿಸಿದ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ. ಮತ್ತು ಅವರ ಮುಂದೆ ಸರದಿ ಸಾಲಿನಲ್ಲಿ ವಿದೇಶದಲ್ಲಿ ಸಭೆ ಸಮ್ಮೇಳನಗಳು, ರಷ್ಯಾ, ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ಫ್ರಾನ್ಸ್ ಅಧ್ಯಕ್ಷರೊಂದಿಗೆ ಭೇಟಿ ಇವೆ ಎನ್ನುತ್ತಿದೆ ಎಕನಾಮಿಕ್ ಟೈಮ್ಸ್ ವರದಿ. ಹೌದು, ಪ್ರಧಾನಿಯವರ ವೇಳಾಪಟ್ಟಿ ಇಂತಿದೆ.
ಜೂನ್ನಲ್ಲಿ, ಶಾಂಘೈ ಸಹಕಾರ ಸಂಸ್ಥೆ (SCO) ಮತ್ತು ಪ್ಯಾರಿಸ್ನಲ್ಲಿ G-7 ಶೃಂಗ ಸಭೆಯಲ್ಲಿ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಮುಂದುವರಿದಂತೆ ಜೂನ್ನಲ್ಲೇ G-20 ಶೃಂಗ ಸಮ್ಮೇಳನ ಜಪಾನಿನ ಒಸಾಕದಲ್ಲಿ ನಡೆಯಲಿದ್ದು, ಇಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಆಗುವ ಸಾಧ್ಯತೆ ಇದೆ. ಈರ್ವರೂ ವ್ಯಾಪಾರ ಮತ್ತು ಇರಾನ್ ದೇಶದ ಕುರಿತು ಚರ್ಚಿಸಲಿದ್ದಾರೆ.
ಜಪಾನ್, ಅಮೇರಿಕ ಮತ್ತು ಭಾರತ (JAI) ಕೂಟದ ಎರಡನೆಯ ಭೇಟಿಯು ಇದೇ G-20 ಶೃಂಗ ಸಮ್ಮೇಳನದ ಸಂದರ್ಭದಲ್ಲಿ ನಡೆಯಲಿದೆ.
ನಂತರದಲ್ಲಿ ಪ್ರಧಾನಿ ಮೋದಿಯವರು ರಷ್ಯಾದ ವ್ಲಾಡಿವೊಸ್ಟೋಕ್ಗೆ ತೆರಳಲಿದ್ದು, ಪೂರ್ವಾತ್ಯ ಆರ್ಥಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸೆಪ್ಟೆಂಬರ್ನಲ್ಲಿ ನ್ಯೂಯಾರ್ಕ್ ನಗರದಲ್ಲಿ ನಡೆಯುವ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಭಾರತ ಸ್ವೀಡನ್ ದೇಶದ ಜೊತೆ ಜಂಟಿಯಾಗಿ ಆಯೋಜಿಸಿರುವ ಹವಾಮಾನ ಬದಲಾವಣೆಯ ಸಭೆ (Climate Change Summit) ಭಾಗವಹಿಸುವ ಸಾಧ್ಯತೆ ಇದೆ.
ನವೆಂಬರ್ ತಿಂಗಳಲ್ಲಿ ಬ್ರೆಜಿಲ್ನಲ್ಲಿ ನಡೆಯುವ BRICS ಸಮ್ಮೇಳನ ಮತ್ತು ಥೈಲ್ಯಾಂಡ್ ದೇಶದಲ್ಲಿ ನಡೆಯುವ ಭಾರತ-ಏಷಿಯಾನ್ ಹಾಗೂ ಪೂರ್ವ ಏಷ್ಯಾ ದೇಶಗಳ ಸಭೆಯಲ್ಲೂ ಪಾಲ್ಗೊಳ್ಳುತ್ತಾರೆ.
ಒಟ್ಟಾರೆ ಹೇಳುವುದಾದರೆ, 2014 ರಲ್ಲಿ ಪ್ರಧಾನಿ ಆದ ದಿವಸದಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ದೇಶ ವಿದೇಶಗಳ ಸುತ್ತಿದ ನಾಯಕ ಮೋದಿಯವರು ಇಂದು ವಿಶ್ವ ಮಟ್ಟದ ರಾಜತಾಂತ್ರಿಕ ನಿಪುಣ ಎನಿಸಿದ್ದಾರೆ. ನೆರೆ ಹೊರೆಯ ರಾಷ್ಟ್ರಗಳಲ್ಲದೇ, ಮುಸ್ಲಿಂ ದೇಶಗಳ ಸಮ್ಮೇಳನಗಳಿಗೂ ಭಾರತಕ್ಕೆ ಆಹ್ವಾನ ಬರುತ್ತಿವುದು ಅವರ ಶ್ರಮವೇ ಸರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.