ಡೆಹ್ರಾಡೂನ್ : ಹಿಂದೂಗಳ ಅತ್ಯಂತ ಪವಿತ್ರ ಕ್ಷೇತ್ರ ಕೇದರಾನಾಥದ ಬಾಗಿಲನ್ನು ತೆರೆದು ಕೇವಲ 12 ದಿನಗಳು ಅಷ್ಟೇ ಆಗಿವೆ. ಈಗಾಗಲೇ ಅಲ್ಲಿಗೆ 1 ಲಕ್ಷಕ್ಕಿಂತಲೂ ಅಧಿಕ ಭಕ್ತಾದಿಗಳು ಆಗಮಿಸಿ ದೇವರ ದರ್ಶನವನ್ನು ಪಡೆದುಕೊಂಡಿದ್ದಾರೆ. ಪ್ರತಿನಿತ್ಯ ಸುಮಾರು 10 ರಿಂದ 12 ಸಾವಿರ ಮಂದಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಒಟ್ಟು 1 ಲಕ್ಷ 43 ಸಾವಿರ ಭಕ್ತಾದಿಗಳು ಆಗಮಿಸಿದ್ದಾರೆ ಎಂದು ಹೇಳಲಾಗಿದೆ.
2013ರ ಜೂನ್ ತಿಂಗಳಲ್ಲಿ ಆಗಮಿಸಿದ್ದ ಪ್ರವಾಹದಿಂದಾಗಿ ಇಡೀ ಕೇದಾರನಾಥ ಪರಿಸರವೇ ಕೊಚ್ಚಿ ಹೋಗಿತ್ತು. ಆ ಬಳಿಕ ಒಂದೆರಡು ವರ್ಷಗಳ ಕಾಲ ಅಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆಯೂ ಕಡಿಮೆಯಾಗಿತ್ತು. ಆದರೆ 2016 ರಿಂದ ಕೇದಾರನಾಥ ಕ್ಷೇತ್ರ ತನ್ನ ಹಿಂದಿನ ವೈಭಕ್ಕೆ ಮರಳಿದೆ. 2016ರಲ್ಲಿ 309533 ಮತ್ತು 2017ರಲ್ಲಿ 471235 ಭಕ್ತಾದಿಗಳು ಇಲ್ಲಿಗೆ ಆಗಮಿಸಿದ್ದಾರೆ. ಕಳೆದ ವರ್ಷ 732241 ಯಾತ್ರಾರ್ಥಿಗಳು ದೇವರ ದರ್ಶನ ಪಡೆದುಕೊಂಡಿದ್ದಾರೆ.
“ಮೋದಿಯವರು ಕೇದಾರಾನಾಥಕ್ಕೆ ಆಗಮಿಸುವ ಮೂಲಕ ಯಾತ್ರಾರ್ಥಿಗಳಿಗೆ ಪ್ರಯಾಣ ಸುರಕ್ಷಿತವಾಗಿದೆ ಎಂಬ ಸಂದೇಶವನ್ನು ನೀಡಿದ್ದಾರೆ. ಹೀಗಾಗಿ ಯಾತ್ರಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚಳವಾಗುತ್ತದೆ” ಎಂದು ಬದ್ರಿ-ಕೇದಾರ್ ಟೆಂಪಲ್ ಕಮಿಟಿ ಮುಖ್ಯಸ್ಥ ಎಂಪಿ ಜಂಮ್ಲೋಕಿ ಹೇಳಿದ್ದಾರೆ.
ಭಾರಿ ಹಿಮಪಾತದ ನಡುವೆಯೂ ಈ ವರ್ಷ ಅಲ್ಲಿ ಮರು ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಇದರಿಂದಾಗಿ ಯಾತ್ರೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.