ಮಂಗಳೂರು : ಇಲ್ಲಿನ ಸಂತ ಅಲೋಶಿಯಸ್ ಕಾಲೇಜಿನ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳಿಂದ ‘ಸ್ತ್ರೀ ಶಕ್ತಿ’ ಮಹಿಳೆಯರ ಆತ್ಮಸಂರಕ್ಷಣೆ ತಂತ್ರಗಳ ಕಾರ್ಯಾಗಾರವು ಮಂಗಳೂರು ಮೂಲದ ಎನ್.ಜಿ.ಓ, ಇಂಟಿಗ್ರೇಟೆಡ್ ಲರ್ನಿಂಗ್ ಸೆಂಟರ್ ಹಾಗೂ ಕರಾಟೆ ಮತ್ತು ಅಲೈಡ್ ಆರ್ಟ್ಸ್ನ ಸಹಯೋಗದಲ್ಲಿ ಮಾ.೩೧ರಂದು ನಡೆಯಿತು.
ಈ ಸಂದರ್ಭ ಮಾತನಾಡಿದ ದ.ಕ. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಹಾಗೂ ವಕೀಲೆ ಆಶಾ ನಾಯಕ್ ಅವರು ಮಹಿಳೆಯರ ಭದ್ರತೆಯ ಬಗೆಗಿನ ಕಾನೂನು ಮತ್ತು ಭಾರತದ ನ್ಯಾಯಾಂಗ ವ್ಯವಸ್ಥೆಯ ಹಲವು ಅಂಶಗಳ ಒಳನೋಟ ನೀಡಿದರು. ಅಲ್ಲದೇ ಸ್ವಾತಂತ್ರ್ಯ ಸಿಕ್ಕು ೬೭ ವರ್ಷದ ಬಳಿಕ ಹೇಗೆ ಮಹಿಳಾ ವಿರುದ್ಧದ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ವಿವರಿಸಿದರು. ಅಲ್ಲದೇ ಮಹಿಳೆಯರ ವಿರುದ್ಧದ ಅಪರಾಧಗಳ ವರದಿಗಳು ಕಡಿಮೆ ಪ್ರಮಾಣದಲ್ಲಿ ಹೊರಬರುತ್ತಿವೆ ಮತ್ತು ಮಹಿಳೆಯ ಗಂಭೀರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಮಹಿಳೆಯರು ಭಾರತದಲ್ಲಿ ನಿಜವಾಗಿಯೂ ಸುರಕ್ಷಿತರೇ ಎಂಬ ಪ್ರಶ್ನೆಯನ್ನು ಮುಂದಿಟ್ಟ ಲರ್ನಿಂಗ್ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ಸಂಹಿತಾ ನಂದಗೋಪಾಲ್ ಅವರು ಮಹಿಳೆಯರು ದೇಶದಲ್ಲಿ ಅಸುರಕ್ಷಿತರು ಎಂದು ಹೇಳಿದರು. ಏಕೆಂದರೆ ನಮ್ಮ ಸಮಾಜದಲ್ಲಿ ನಾವು ದೀನರ ಮತ್ತು ಗಣ್ಯರ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದೇವೆ. ಪಿತೃಪ್ರಧಾನ ಸಮಾಜದಲ್ಲಿ ಮಹಿಳಾ ಸಬಲೀಕರಣದ ನಮ್ಮ ತುರ್ತು ಅಗತ್ಯ ನಿಜವಾಗಿಯೂ ಇದೆ ಎಂದರು.
ಕಾರ್ಯಕ್ರಮವನ್ನು ಗ್ಲಾಡ್ವಿನ್ ಫೆರ್ನಾಂಡಿಸ್ ಉದ್ಘಾಟಿಸಿದರು. ಇಂಟಗ್ರೇಟೆಡ್ ಲರ್ನಿಂಗ್ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀಮತಿ ಸಂಹಿತಾ ನಂದಗೋಪಾಲ್ ಉಪಸ್ಥಿತರಿದ್ದರು.
ಇದು ಕಳೆದ ಬಾರಿ ಪ್ರಥಮ ವರ್ಷದ ವಿದ್ಯಾರ್ಥಿಗಳು ನಡೆಸಿದ ಕಾರ್ಯಾಗಾರದಲ್ಲಿ ‘ನಿರ್ಭಯತ’ ಬೀದಿ ನಾಟಕ ಪ್ರದರ್ಶಿಸಲಾಗಿತ್ತು ‘ಸ್ತ್ರೀ ಶಕ್ತಿ’ ಅದರ ಮುಂದುವರಿದ ಭಾಗವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.