ನವದೆಹಲಿ: ಮತಯಂತ್ರಗಳ ಬಗೆಗಿನ ದೂರುಗಳನ್ನು ಪರಿಶೀಲನೆ ನಡೆಸುವುದಕ್ಕಾಗಿ ಚುನಾವಣಾ ಆಯೋಗವು ನವದೆಹಲಿಯ ನಿರ್ವಚನ್ ಸದನ ಸಮೀಪ 24 ಗಂಟೆ ಕಾರ್ಯನಿರ್ವಹಣೆ ಮಾಡುವ ಕಂಟ್ರೋಲ್ ರೂಮ್ ಅನ್ನು ಸ್ಥಾಪನೆ ಮಾಡಿದೆ.
2019ರ ಲೋಕಸಭಾ ಚುನಾವಣೆಗೆ ಬಳಸಲಾದ ಮತಯಂತ್ರಗಳನ್ನು ತಿರುಚಲಾಗುತ್ತಿದೆ, ದುರ್ಬಳಕೆ ಮಾಡಲಾಗುತ್ತಿದೆ ಎಂಬಿತ್ಯಾದಿ ಆರೋಪಗಳನ್ನು ಪ್ರತಿಪಕ್ಷಗಳು ಮಾಡುತ್ತಿರುವುದರಿಂದ ಈ ಕಂಟ್ರೋಲ್ ರೂಮ್ ಅನ್ನು ಮಂಗಳವಾರ ಸ್ಥಾಪನೆ ಮಾಡಲಾಗಿದೆ.
ಸ್ಟ್ರಾಂಗ್ ರೂಮ್ಗಳ ಸ್ಟೋರೇಜ್, ಭದ್ರತೆ, ಸ್ಟ್ರಾಂಗ್ ರೂಮ್ಗಳಲ್ಲಿ ಆಯಾ ಪಕ್ಷಗಳ ಏಜೆಂಟ್ಗಳನ್ನು ನಿಯೋಜಿಸಲು ಅನುಮತಿ, ಸಿಸಿಟಿವಿ ಮಾನಿಟರಿಂಗ್, ಇವಿಎಂಗಳ ಚಲನವಲನ, ಇವಿಎಂಗಳಲ್ಲಿನ ಮತಗಳ ಎಣಿಕೆ ವೇಳೆ ಅಕ್ರಮ ಮುಂತಾದ ಯಾವುದೇ ವಿಷಯಗಳಿಗೆ ಸಂಬಂಧಿಸಿದ ದೂರಗಳನ್ನೂ ಈ ಕಂಟ್ರೋಲ್ ರೂಮ್ಗೆ ನೀಡಬಹುದಾಗಿದೆ.
ಮತ ಎಣಿಕೆ ದಿನದಂದು ಇವಿಎಂಗಳಿಗೆ ಸಂಬಂಧಿಸಿದ ಯಾವುದೇ ದೂರು ಇದ್ದರೂ ಅದನ್ನು 011-23052123 ನಂಬರ್ಗೆ ಫೋನಾಯಿಸಿ ದೂರು ನೀಡಬಹುದಾಗಿದೆ.
ಇವಿಎಂಗಳು ಸ್ಟ್ರಾಂಗ್ ರೂಮ್ಗಳಲ್ಲಿ ಭದ್ರವಾಗಿದೆ, ಅಲ್ಲಿ 24 ಗಂಟೆಯೂ ಸಿಸಿಟಿವಿ ಮಾನಿಟರಿಂಗ್ ಇದೆ, ಭದ್ರತಾ ಪಡೆಗಳು ಕಾವಲು ಕಾಯುತ್ತಿದೆ ಎಂಬುದನ್ನು ಈಗಾಗಲೇ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಆದರೂ ಪ್ರತಿಪಕ್ಷಗಳು ಮಾತ್ರ ಇವಿಎಂಗಳ ಮೇಲೆ ಗೂಬೆ ಕೂರಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.