ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಶಾಂತಿಪಾಲನೆ ಮಿಶನ್ಗೆ ಭಾರತದ ಅತೀದೊಡ್ಡ ಕೊಡುಗೆದಾರನಾಗಿದೆ. ಭಾರತೀಯ ಸೈನಿಕರು ವಿಶ್ವವನ್ನು ದುಷ್ಟರಿಂದ ರಕ್ಷಣೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಮಿಶನ್ ಸಂದರ್ಭದಲ್ಲಿ ಭಾರತದ ಪೊಲೀಸ್ ಅಧಿಕಾರಿ ಜಿತೇಂದ್ರ ಕುಮಾರ್ ಅವರು ಹುತಾತ್ಮರಾಗಿದ್ದರು. ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಶಾಂತಿಪಾಲನೆ ಕಾರ್ಯದಲ್ಲಿದ್ದಾಗ ಅವರು ಹುತಾತ್ಮರಾಗಿದ್ದರು.
ಈ ವರ್ಷ ಧೈರ್ಯ ಮತ್ತು ತ್ಯಾಗಕ್ಕಾಗಿ ನೀಡಲಾಗುವ ಪ್ರತಿಷ್ಠಿತ ವಿಶ್ವಸಂಸ್ಥೆ ಪದಕವನ್ನು ಪಡೆದ 119 ಮಿಲಿಟರಿ, ಪೊಲೀಸ್ ಮತ್ತು ಸಿವಿಲಿಯನ್ ಸಿಬ್ಬಂದಿಗಳ ಪೈಕಿ ಭಾರತದ ಜಿತೇಂದ್ರ ಕುಮಾರ್ ಕೂಡ ಒಬ್ಬರು.
ಮುಂದಿನ ಶುಕ್ರವಾರ “ವಿಶ್ವಸಂಸ್ಥೆ ಶಾಂತಿಪಾಲಕರ ಅಂತಾರಾಷ್ಟ್ರೀಯ ದಿನ’ವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮರಣೋತ್ತರವಾಗಿ ಜಿತೇಂದ್ರ ಕುಮಾರ್ ಅವರಿಗೆ ‘ದಾಗ್ ಹ್ಯಾಮರ್ಸ್ಕ್ಯಾಲ್ಡ್ ಮೆಡಲ್’ (Dag Hammarskjold Medal) ಅನ್ನು ನೀಡಿ ಗೌರವಿಸಲಾಗುತ್ತಿದೆ.
ಜಿತೇಂದ್ರ ಕುಮಾರ್ ಅವರ ಪರವಾಗಿ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿಯಾಗಿರುವ ಸೈಯದ್ ಅಕ್ಬರುದ್ದೀನ್ ಅವರು ಮಡೆಲ್ ಅನ್ನು ಸ್ವೀಕಾರ ಮಾಡಲಿದ್ದಾರೆ.
ವಿಶ್ವಸಂಸ್ಥೆ ಮಾಹಿತಿ ಪ್ರಕಾರ, ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಭಾರತದ ಅತೀಹೆಚ್ಚು ಶಾಂತಿಪಾಲಕರು ಹುತಾತ್ಮರಾಗಿದ್ದಾರೆ. 194 8ರಿಂದ ಒಟ್ಟು 3,737 ಶಾಂತಿಪಾಲಕರು ಹುತಾತ್ಮರಾಗಿದ್ದಾರೆ. ಇದರಲ್ಲಿ 163 ಮಂದಿ ಭಾರತೀಯರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.