ಅಯೋಧ್ಯೆ: ಉತ್ತರಪ್ರದೇಶದ ಒಂದು ಭಾಗವಾಗಿರುವ ಅಯೋಧ್ಯೆ ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಜನ್ಮಭೂಮಿ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಇದು ಹಲವು ವರ್ಷಗಳಿಂದ ಕೋಮು ಘರ್ಷಣೆಗೆ ಸುದ್ದಿಯಲ್ಲಿದೆ. ಆದರೆ ಅಲ್ಲಿಯೂ ಧಾರ್ಮಿಕ ಸೌಹಾರ್ದತೆಯ ಸನ್ನಿವೇಶಗಳು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ ಎಂಬುದಕ್ಕೆ ಅಲ್ಲಿ ಸೋಮವಾರ ಆಯೋಜನೆಗೊಳಿಸಲಾಗಿದ್ದ ಇಫ್ತಾರ್ ಕೂಟವೇ ಉದಾಹರಣೆ.
ಹೌದು, ಅಯೋಧ್ಯಾದ ಸೀತಾರಾಮ ದೇಗುಲದಲ್ಲಿ ಮುಸ್ಲಿಂ ಬಾಂಧವರಿಗಾಗಿ ಇಫ್ತಾರ್ ಕೂಟವನ್ನು ಆಯೋಜನೆಗೊಳಿಸಲಾಗಿದೆ. ಅಪಾರ ಸಂಖ್ಯೆಯ ಮುಸ್ಲಿಮರು ಇಲ್ಲಿಗೆ ಆಗಮಿಸಿ ಭೋಜನವನ್ನು ಸವಿದರು.
ದೇಗುಲದ ಅರ್ಚಕ ಯುಗಲ್ ಕಿಶೋರ್ ಅವರು ಇಫ್ತಾರ್ ಕೂಟವನ್ನು ಆಯೋಜಿಸಿದ್ದಾರೆ. ಇದು ದೇಗುಲದಲ್ಲಿ ನಡೆಯುತ್ತಿರುವ 3ನೇ ಇಫ್ತಾರ್ ಕೂಟವಾಗಿದೆ. ಭವಿಷ್ಯದಲ್ಲೂ ಇದು ಮುಂದುವರೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನವರಾತ್ರಿಯ ಸಂದರ್ಭದಲ್ಲೂ ಹಿಂದೂ ಬಾಂಧವರ ಜೊತೆಗೂಡಿ ನಾವು ಹಬ್ಬವನ್ನು ಆಚರಿಸುತ್ತೇವೆ, ಇಂತಹ ಆಚರಣೆಗಳು ಮುಂದುವರೆಯಬೇಕಾಗಿರುವ ಅತ್ಯವಶ್ಯಕ ಎಂದು ಇಫ್ತಾರ್ ಕೂಟಕ್ಕೆ ಆಗಮಿಸಿದ್ದ ಮುಸ್ಲಿಂ ಮುಖಂಡರೊಬ್ಬರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.